Breaking News

ತಾಯಿಯನ್ನು ಕೊಂದ ಮಗಳು; ಮೃತದೇಹವನ್ನು 3 ತಿಂಗಳು ಮನೆಯಲ್ಲೇ ಬಚ್ಚಿಟ್ಟಳು!

Spread the love

ಹಾರಾಷ್ಟ್ರ: ಕಳೆದ ಡಿಸೆಂಬರ್​ನಲ್ಲಿ ಮಹಿಳೆಯೊಬ್ಬಳ ಕೊಲೆಗೆ ಸಂಬಂಧಿಸಿದಂತೆ ಕಲಾಚೌಕಿ ಪೊಲೀಸರು ಆಕೆಯ ಮಗಳನ್ನು ಬಂಧಿಸಿದ್ದಾರೆ. ವೀಣಾ(55) ಮಗಳಿಂದ ಹತ್ಯೆಗೀಡಾದ ಮಹಿಳೆ. ರಿಂಪಲ್ ಜೈನ್(24) ಕೊಲೆ ಆರೋಪಿಯಾಗಿದ್ದು, ತಾಯಿಯನ್ನೇ ಹತ್ಯೆ ಮಾಡಿದ್ದಾಳೆ.

 

ತಾಯಿಯನ್ನು ಹತ್ಯೆ ಮಾಡಿದ ಬಳಿಕ ರಿಂಪಲ್ ಜೈನ್, ಮೃತದೇಹವನ್ನು ಹಲವು ತುಂಡುಗಳನ್ನಾಗಿ ಕತ್ತರಿಸಿ, ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಾಳೆ. ಶವ ಕೊಳೆತು ವಾಸನೆ ಬರಬಾರದೆಂದು 200ಕ್ಕೂ ಅಧಿಕ ಸುಗಂಧದ್ರವ್ಯ ಹಾಗೂ ರೂಂ ಪ್ರಶ್ನರ್​ಗಳನ್ನು ಬಳಸಿದ್ದಾಳೆ. ತನ್ನ ಕೃತ್ಯದ ಬಗ್ಗೆ ಯಾರಿಗೂ ಅನುಮಾನ ಬರಬಾರದೆಂದು ರಿಂಪಲ್, ತನ್ನ ಮನೆಯ ನೆರೆಹೊರೆಯ ಮಂದಿಯೊಂದಿಗೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಕಳೆದ ಮಂಗಳವಾರ ರಾತ್ರಿ ರಿಂಪಲ್ ಜೈನ್​ಳ ಸೋದರ ಸಂಬಂಧಿ ಹಣ ಕೊಡಲು ಬಂದಾಗ, ತಾಯಿ ಎಲ್ಲಿದ್ದಾಳೆ ಎಂದು ವಿಚಾರಿಸಿದ್ದಾರೆ. ಈ ವೇಳೆ ತಾಯಿ ಕಾನ್ಪುರಕ್ಕೆ ಹೋಗಿರುವಾಗಿ ತಿಳಿಸಿದ್ದಾಳೆ. ಆದರೆ ಅನುಮಾನ ಬಂದ ಸಂಬಂಧಿ ಮನೆಗೆ ಹಿಂತಿರುಗಿ, ತನ್ನ ಮಗನಲ್ಲಿ ಹೇಳಿದ್ದಾರೆ. ಬಳಿಕೆ ಇಬ್ಬರು ರಿಂಪಲ್ ಮನೆಗೆ ಬಂದಾಗ ಬಾಗಿಲು ತೆರೆಯಲು ನಿರಾಕರಿಸಿದ್ದಾಳೆ. ಕೊನೆಗೆ ನೆರೆಮಂದಿಯ ಸಹಾಯದೊಂದಿಗೆ ಮನೆ ಪ್ರವೇಶಿಸಿದಾಗ ಕೊಳೆತ ವಾಸನೆ ಬರುತ್ತಿರುವುದು ಗೊತ್ತಾಗಿದೆ. ಮನೆಯನ್ನು ಪರಿಶೀಲಿಸಿದಾಗ ವೀಣಾ ಕೊಲೆಯಾಗಿ ಹೋಗಿರುವುದು ಬೆಳಕಿಗೆ ಬಂದಿದೆ.

ಕೂಡಲೇ ವೀಣಾ ಕೊಲೆಯಾಗಿರುವ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ವಿವಿಧೆಡೆ ಮೃತದೇಹದ ಕತ್ತರಿಸಿದ ಭಾಗಗಳು ಪತ್ತೆಯಾಗಿದೆ. ಟೈಲ್ಸ್​ ಕತ್ತರಿಸುವ ಯಂತ್ರದಿಂದ ರಿಂಪಲ್ ತನ್ನ ತಾಯಿಯ ಮೃತದೇಹವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ