Breaking News

ಹಾಯ್ ಹೇಗಿದ್ದೀರಾ? ಹೇಗಿದೆ ಲೈಫ್? ಭೂಮಿ ಶೆಟ್ಟಿ

Spread the love

ಕಿನ್ನರಿ ಧಾರಾವಾಹಿ ಹಾಗೂ ಬಿಗ್‍ಬಾಸ್ ಸೀಸನ್ 7ರ ಸ್ಪರ್ಧಿ ಭೂಮಿ ಶೆಟ್ಟಿ ಈಗ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಅವರ ಹೊಸ ಪ್ರಾಜೆಕ್ಟ್ ಹಾಗೂ ಬಿಗ್‍ಬಾಸ್ ನಂತರದ ಜೀವನದ ಬಗ್ಗೆ ಒಂದಿಷ್ಟು ವಿಚಾರಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

• ಹಾಯ್ ಹೇಗಿದ್ದೀರಾ? ಹೇಗಿದೆ ಲೈಫ್?
ನಾನು ಸೂಪರ್ ಆಗಿದ್ದೀನಿ. ಲೈಫ್ ಬೊಂಬಾಟ್ ಆಗಿದೆ. ಬಿಗ್‍ಬಾಸ್‍ನಿಂದ ಬಂದ ಮೇಲೆ ಒಂದಿಷ್ಟು ಹೊಸ ಹೊಸ ಅವಕಾಶಗಳು ಸಿಕ್ತಿವೆ. ಸದ್ಯಕ್ಕೆ ಕೊರೊನಾದಿಂದ ಪಾರಾದ್ರೆ ಸಾಕಾಗಿದೆ.

• ಬಿಗ್‍ಬಾಸ್ ಮುಗಿದ ನಂತರ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡ್ರಾ?
ಅವಕಾಶಗಳು ಬರ್ತಾ ಇದೆ. ಒಂದಿಷ್ಟು ಶೋಗಳು ಬಂದಿವೆ ಫೈನಲ್ ಆದ ಬಳಿಕ ತಿಳಿಸುತ್ತೇನೆ. ಸದ್ಯಕ್ಕೆ ಧಾರಾವಾಹಿ ಬಿಟ್ಟು ಸಿನಿಮಾ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಅನ್‍ಲಾಕ್ ಮೂರನೇ ಹಂತದಲ್ಲಿ ಒಂದು ಸಿನಿಮಾ ಒಪ್ಪಿಕೊಂಡೆ. ಇಕ್ಕಟ್ ಎಂದು ಆ ಸಿನಿಮಾ ಹೆಸರು. ಕಾಮಿಡಿ ಥ್ರಿಲ್ಲರ್ ಇರೋ ಸಿನಿಮಾ. ಇದು ನನ್ನ ಮೊದಲ ಸಿನಿಮಾ. ಶೂಟಿಂಗ್ ಕಂಪ್ಲೀಟ್ ಆಗಿ ಡಬ್ಬಿಂಗ್ ಕೂಡ ಮುಗಿದಿದೆ. ನಾಗ್ ಭೂಷಣ್ ಸರ್ ಹಾಗೂ ನಾನು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ.

• ಎಜುಕೇಷನ್ ಅರ್ಧಕ್ಕೆ ನಿಲ್ಲಿಸಿದ್ದೀರಾ ಪೂರ್ಣ ಮಾಡೋ ಯೋಚನೆ ಇದಿಯಾ?
ನಾನು ಎಂಜಿನಿಯರಿಂಗ್ ಅರ್ಧಕ್ಕೆ ನಿಲ್ಲಿಸಿದೆ. ನಟನೆ ಮಾಡೋ ಆಸೆಯಿಂದ ಎಜುಕೇಶನ್‍ಗೆ ಫುಲ್ ಸ್ಟಾಪ್ ಇಟ್ಟೆ. ಅದನ್ನು ಪೂರ್ಣ ಮಾಡೋ ಬಗ್ಗೆ ಈಗ ಯೋಚನೆ ಇಲ್ಲ. ನನಗೆ ನಾನು ಎಲ್ಲಿ ಹೋದ್ರು ಸರ್ವೈವ್ ಆಗ್ತೀನಿ ಅನ್ನೋ ಕಾನ್ಫಿಡೆನ್ಸ್ ಇದೆ. ಡಿಗ್ರಿ ಇದ್ರೆ ಮಾತ್ರ ಜೀವನದಲ್ಲಿ ಮುಂದೆ ಬರೋಕೆ ಆಗುತ್ತೆ ಅನ್ನೋದು ನನ್ನ ಪ್ರಕಾರ ತಪ್ಪು. ಓದು ಜೀವನವನ್ನ ಹೇಳಿಕೊಡೋದಿಲ್ಲ. ಜೀವನಕ್ಕೆ ಏನ್ ಬೇಕು ಅದನ್ನ ನಾವು ಕಲಿತುಕೊಂಡಿರಬೇಕು, ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕು. ಎಲ್ಲಿ ಹೋದ್ರು ಬದುಕಿ ಬರೋವಷ್ಟು ಧೈರ್ಯ, ಸಾಧಿಸಿ ಬರುವ ಛಲ ನನಗಿದೆ. ಹಾಗಂತ ಓದಬೇಡಿ ಅಂತ ನಾನು ಯಾರಿಗೂ ಹೇಳೋದಿಲ್ಲ. ನಮಗೆ ಏನ್ ಖುಷಿ ಕೊಡುತ್ತೆ ಅದನ್ನ ಮಾಡಬೇಕು ಅದು ನನ್ನ ಪಾಲಿಸಿ.

• ನಿಮ್ಮ ಕನಸುಗಳೇನು. ಏನಾಗಬೇಕು ಅನ್ನೋದು ನಿಮ್ಮ ಆಸೆ?
ನನಗೆ ಇಂತಹದ್ದೇ ಕನಸು ಅಂತ ಏನಿಲ್ಲ. ಜೀವನ ಹೇಗೆ ಬರುತ್ತೋ ಆ ರೀತಿ ಸ್ವೀಕರಿಸುತ್ತೇನೆ. ನನ್ನ ಮನಸ್ಸಿಗೆ ಸರಿ ಅನ್ಸಿದ್ದನ್ನ ನಾನು ಮಾಡುತ್ತೇನೆ. ಫೈನಲ್ ಆಗಿ ನಾನು ಮಾಡೋ ಕೆಲಸ ನನ್ನ ಮನಸ್ಸಿಗೆ ಖುಷಿ, ತೃಪ್ತಿ ನೀಡಬೇಕು ಅಷ್ಟೇ. ಇದನ್ನೇ ಮಾಡಬೇಕು, ನಾನು ಹೀಗೆ ಆಗಬೇಕು ಅನ್ನೋದು ಏನಿಲ್ಲ.


Spread the love

About Laxminews 24x7

Check Also

ಮೇಶ್ ಜಾರಕಿಹೊಳಿ ವಿರುದ್ಧ ಸುಳ್ಳು ಸುದ್ದಿ: ₹20 ಕೋಟಿ ಮಾನನಷ್ಟ ಕೇಸ್‌

Spread the loveಬೆಳಗಾವಿ: ಅಸ್ತಿತ್ವದಲ್ಲಿ ಇಲ್ಲದ ಖಾಸಗಿ ಮಾಧ್ಯಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಅಪಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ