Breaking News

ಬರೊಬ್ಬರಿ 56 !ಬ್ಲೇಡುಗಳನ್ನು ನುಂಗಿದಮಹಾನುಭಾವ

Spread the love

ಜೈಪುರ: ಚಿತ್ರ ವಿಚಿತ್ರ ವರ್ತನೆಗಳ ಜನ ನಮ್ಮಲ್ಲಿ ನೋಡಸಿಗುತ್ತಾರೆ. ಇಂಥವರಲ್ಲೂ ಕೆಲವರ ವಿಲಕ್ಷಣ ಗುಣಗಳು ಅಸಾಧ್ಯವನ್ನೂ ಸಾಧ್ಯವಾಗಿಸಿರುತ್ತವೆ. ಇದಕ್ಕೆ ಇಲ್ಲೊಬ್ಬ ಮಹಾನುಭಾವ ಜ್ವಲಂತ ಉದಾಹರಣೆಯಾಗಿದ್ದಾನೆ.

ಇವನ ಘನಕಾರ್ಯವೇನೆಂದರೆ ಶೇವಿಂಗ್ ಬ್ಲೇಡುಗಳನ್ನು ನುಂಗಿದ್ದು. ಅದು ಒಂದೆರಡಲ್ಲ… ಬರೊಬ್ಬರಿ 56 !

ರಾಜಸ್ಥಾನದ ಸಂಚೋರ್ ಪಟ್ಟಣದ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯಶಪಾಲ್ ಸಿಂಗ್ (25) ಹೊಟ್ಟೆಯಿಂದ ವೈದ್ಯರು 56 ಬ್ಲೇಡುಗಳನ್ನು ಹೊರತೆಗೆದಿದ್ದಾರೆ.

ತನ್ನ ಸಹವರ್ತಿಗಳೊಂದಿಗೆ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ ಈತ ಕಳೆದ ಕೆಲ ದಿನಗಳಿಂದ ರಕ್ತ ಕಾರುತ್ತಿದ್ದ. ಹೀಗಾಗಿ ಮಿತ್ರೆಲ್ಲ ಸೇರಿ ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯಕೀಯ ಪರೀಕ್ಷೆ ವೇಳೆಗೆ ಈತನ ಹೊಟ್ಟಯಲ್ಲಿರುವ ಬ್ಲೇಡುಗಳನ್ನು ಪತ್ತೆ ಮಾಡಿದ ವೈದ್ಯರು ಬೆಚ್ಚಿಬಿದ್ದಿದ್ದಾರೆ.

ಮಾಹಿತಿಗಳ ಪ್ರಕಾರ ಈತ ಪೇಪರ್ ಕವರ್ ಸಹಿತ ಬ್ಲೇಡುಗಳನ್ನು ನುಂಗಿದ್ದ. ಆದರೆ ಹೊಟ್ಟೆಯಲ್ಲಿ ಪೇಪರ್ ಕರಗಿದ ನಂತರ ಹರಿತವಾದ ಬ್ಲೇಡುಗಳು ಕೊರೆತ ಆರಂಭಿಸಿದಾಗ ರಕ್ತ ಕಾರಿಕೊಳ್ಳಲಾರಂಭಿಸಿದ್ದ. ಕೊನೆಗೂ ಶಸ್ತ್ರಕ್ರಿಯೆ ನಡೆಸಿ ಎಲ್ಲ ಬ್ಲೇಡುಗಳನ್ನು ಹೊರತೆಗೆದ ವೈದ್ಯರು ಸದ್ಯ ಈತ ಅಪಾಯದಿಂದ ಪಾರಾಗಿರುವುದಾಗಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ