ಬೆಳಗಾವಿ: ‘ಜಗತ್ತು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಂತೆ ಅದಕ್ಕೆ ಪೂರಕವಾಗಿ ನಾವೂ ನಮ್ಮನ್ನು ಹೊಂದಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮೂಲಕ ಶಿಕ್ಷಣ ಒದಗಿಸಲು ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಹಿಂಡಲಗಾ ಗ್ರಾಮದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಹಣ ಮಂಜೂರು ಮಾಡಿಸಿದ ಅನುದಾನದಲ್ಲಿ ನಿರ್ಮಿಸಲಾದ ನೂತನ ಸ್ಮಾರ್ಟ್ ಕ್ಲಾಸ್ ಸೇವೆ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ಮಾರ್ಟ್ ಕ್ಲಾಸ್ ಸೇವೆಯಲ್ಲಿ ಪ್ರೊಜೆಕ್ಟರ್, ಎಸಿ, ಬೆಂಚ್, ಯುಪಿಎಸ್ ಮತ್ತು ಇನ್ವರ್ಟರ್, ಕಂಪ್ಯೂಟರ್, ಪ್ರಿಂಟರ್, ಟ್ಯಾಬ್, ಸ್ಮಾರ್ಟ್ ಕ್ಯಾಬಿನೆಟ್, ಪೋಡಿಯಮ್, ವಿಂಡೋ ಕರ್ಟನ್ಸ್, ಡೋರ್, ಮ್ಯಾಟ್ಸ್, ಡಿಜಿಟಲ್ ಕಂಟೆಂಟ್, ಎಲೆಕ್ಟ್ರಿಶಿಯನ್, ವಾಲ್ ಕ್ಲಾಕ್, ನೇಮ್ ಪ್ಲೇಟ್, ಪೇಂಟಿಂಗ್, ಟೈಲ್ಸ್ ಹಾಗೂ ಮುಂತಾದ ಸಾಮಗ್ರಿಗಳನ್ನು ಅಳವಡಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರಾಹುಲ್ ಉರಣಕರ್, ಎಸ್‌ಡಿಎಂಸಿ ಸದಸ್ಯರು, ವಿಠ್ಠಲ ದೇಸಾಯಿ, ಚೇತನಾ ಅಗಸ್ಗೇಕರ್, ಸೀಮಾ ದೇವಕರ್, ಅಶೋಕ ಕಾಂಬಳೆ, ಗಜಾನಂದ ಕಾಕತ್ಕರ್, ಸಂತೋಷ ಫರ್ನಾಂಡಿಸ್, ಮೃಣಾಲ್ ಹೆಬ್ಬಾಳಕರ ಇದ್ದರು.
ಚಾಲನೆ: ತಾಲ್ಲೂಕಿನ ಬಿಜಗರಣಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಚಾಲನೆ ನೀಡಿದರು.
ಗ್ರಾಮದ ಹಿರಿಯರಾದ ಪೂಜಾ ಸುತಾರ, ಮನೋಹರ್ ಬೆಳಗಾಂವ್ಕರ್ ಚಂದ್ರಭಾಗ ಜಾಧವ್, ಲಕ್ಷ್ಮೀ ಪಾಟೀಲ, ಮಂಜುಳಾ ಕೌಶಿಕ ಇತರರು ಇದ್ದರು.
ರಸ್ತೆ ಕಾಮಗಾರಿ: ಹಿಂಡಲಗಾದ ಸಮರ್ಥ ಕಾಲೊನಿಯ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ₹38 ಲಕ್ಷ ಅನುದಾನದಲ್ಲಿ ಕೈಗೊಂಡ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಗುರುವಾರ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ವಿಠ್ಠಲ ದೇಸಾಯಿ, ಪ್ರವೀಣ ಪಾಟೀಲ, ರಾಹುಲ್ ಉರಣಕರ್, ಅಶೋಕ ಕಾಂಬಳೆ, ಗಜಾನಂದ ಬಾಂಡೇಕರ್, ಸೀಮಾ ದೇವಕರ್, ಚೇತನಾ ಅಗಸ್ಗೆಕರ್, ನಿಖಿಲ್ ಸಿಂಗ್ ರಜಪೂತ್ ಇತರರು ಇದ್ದರು.