ಐಗಳಿ: ಐಗಳಿ ಕ್ರಾಸ್‌ನ ಮಣಿಕಪ್ರಭು ದೇವರ ಜಾತ್ರೆಯ ಪೂರ್ವದಲ್ಲಿ ಬೃಹತ್ ಪ್ರಮಾಣದ ಜಾನುವಾರ ಜಾತ್ರೆ ಸೋಮವಾರ ಆರಂಭವಾಯಿತು.
ರಾಜ್ಯವೂ ಸೇರಿದಂತೆ ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ, ಪಂಡರಪುರ, ಆಂಧ್ರ ಪ್ರದೇಶದಿಂದಲೂ ವ್ಯಾಪಾರಿಗಳು ಬಂದಿದ್ದಾರೆ.
ಜಾತ್ರಾ ಕಮಿಟಿಯವರು ನೀರಿನ ಹಾಗೂ ಬೆಳಕಿನ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ರಾಚೋಟೇಶ್ವರ ಶಿವಯೋಗಿಗಳು ಕಂಡ ಕನಸು ನನಸಾಗಲೂ ಸಮೀಪಕ್ಕೆ ಬಂದಿದೆ ಎಂದು ಹಿರಿಯ ವ್ಯವಸ್ಥಾಪಕ ಶಿದರಾಯ ಬಿರಾದಾರ ಹೇಳಿದರು.
ಟ್ರಸ್ಟ್ ಅಧ್ಯಕ್ಷ ಪ್ರಲ್ಹಾದ್ ಪಾಟೀಲ, ಗುರಪ್ಪ ಬಿರಾದಾರ, ರವಿ ಹಾಲಳ್ಳಿ, ಭೈರಪ್ಪ ಬಿಜ್ಜರಗಿ, ಸದಾಶಿವ ಏಳ್ಳೂರ. ಕೆ.ಎಸ್.ಬಿರಾದಾರ ಇದ್ದರು.