Breaking News

ಮಹಿಳಾ ದಿನಾಚರಣೆ; ನಾಳೆ BMTCಯಲ್ಲಿ ಉಚಿತ ಪ್ರಯಾಣ

Spread the love

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಿಎಂಟಿಸಿ ಬಸ್​​ಗಳಲ್ಲಿ ನಾಳೆ (ಮಾ.8)ರಂದು ಒಂದು ದಿನ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಮಹಿಳಾ ದಿನಾಚರಣೆ ಅಂಗವಾಗಿ ಒಂದು ದಿನ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅನುಮತಿ ನೀಡಿ ಎಂದು ಸರ್ಕಾರಕ್ಕೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ (ಎಂ.ಡಿ) ಸತ್ಯವತಿ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಸೆಕ್ರೆಟರಿ ಎನ್. ವಿ ಪ್ರಸಾದ್ ಇಂದು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚಣೆಯ ಅಂಗವಾಗಿ 2023 ಮಾರ್ಚ್​ 8 ರಂದು ಬೆಂಗಳೂರಿನ ಎಲ್ಲಾ ಸಾರಿಗೆ ಸೇವೆಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಒಂದು ದಿನ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿದೆ.


Spread the love

About Laxminews 24x7

Check Also

ಪತ್ನಿ ಮೃತಪಟ್ಟ 3 ಗಂಟೆಯ ಬಳಿಕ ಪತಿ ಸಾವು; ಒಟ್ಟಿಗೆ ಅಂತ್ಯಕ್ರಿಯೆ

Spread the loveಬೀದರ್: ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ದಂಪತಿಗಳು ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ