Breaking News

ತಂದೆಯಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದ: ನಟಿ ಖುಷ್ಬೂ

Spread the love

ಚೆನ್ನೈ: ನಟಿ ಹಾಗೂ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಬಹಿರಂಗ ಮಾಡಿದ್ದಾರೆ.

‘ನಾನು ಎಂಟು ವರ್ಷದವಳಿದ್ದಾಗ ನನ್ನ ತಂದೆ ನನ್ನ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದರು’ ಎಂದು ಹೇಳಿದ್ದಾರೆ.

 

ಪತ್ರಕರ್ತೆ ಬರ್ಕಾ ದತ್ ಅವರ ದಿ ಮೋಜೊ ಸ್ಟೋರಿಯ ‘ವಿ ದಿ ವುಮನ್’ ಸಂದರ್ಶನದಲ್ಲಿ ಖುಷ್ಬೂ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಖುಷ್ಬೂ ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

‘ನನ್ನ ತಂದೆ, ನನ್ನ ತಾಯಿಯನ್ನು ತುಂಬಾ ಹೊಡೆಯುವುದು, ಹಿಂಸೆ ನೀಡುವುದು ಮಾಡುತ್ತಿದ್ದರು. ಹೆಂಡತಿ-ಮಕ್ಕಳನ್ನು ಹೊಡೆಯುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಆತ ಭಾವಿಸಿದ್ದ. ಕ್ರಮೇಣ ನಾನು 8 ವರ್ಷದವಳಿದ್ದಾಗ ನನ್ನ ಮೇಲೆ ಲೈಂಗಿಕ ಶೋಷಣೆ ಮಾಡಲು ಪ್ರಯತ್ನಿಸುತ್ತಿದ್ದ. ಆದರೆ, ಅದನ್ನು ನಾನು ಬಲವಾಗಿ ವಿರೋಧಿಸುತ್ತಿದ್ದೆ. 15 ವರ್ಷವಳಾದಾಗ ತಂದೆಯ ವಿರುದ್ಧ ಮಾತನಾಡಲು ಆರಂಭಿಸಿದ್ದೆ’ ಎಂದು ಹೇಳಿದ್ದಾರೆ.

‘ನನ್ನ ಮೇಲೆ ಶೋಷಣೆ ನಡೆಯುವುದು ನನ್ನ ತಾಯಿ ಗಮನಕ್ಕೆ ಬಂದಿತ್ತು. ಆದರೆ, ಏನೇ ಆಗಲಿ ಪತಿಯೇ ಪರದೈವ ಎಂಬ ಮನೋಭಾವದ ಮಹಿಳೆ ಅವರಾಗಿದ್ದರು. ನಾನು 16 ವರ್ಷದವಳಿದ್ದಾಗ ತಂದೆ ನಮ್ಮನ್ನು ಬಿಟ್ಟು ಹೋದರು, ಮುಂದೆ ಅವರು ಏನಾದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ