Breaking News

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಡಿಕೆ ಶಿವಕುಮಾರ್!

Spread the love

ಬೆಂಗಳೂರು : ನಿನ್ನೆ ಕೂಡ ಗ್ಯಾಸ್ ಬೆಲೆ ಏರಿಸಿದ್ದಾರೆ. ಪದೇ ಪದೇ ಏರಿಕೆಯಾಗ್ತಾನೇ ಇದೆ. ಈಗ ಚುನಾವಣೆ ಇದೆ ಅಂತ ಮೋದಿ ಬರುತ್ತಿದ್ದಾರೆ. ಸಾವು, ಪ್ರವಾಹ ಆದಾಗ ರಾಜ್ಯಕ್ಕೆ ಬರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮತ್ತೆ ಗ್ಯಾಸ್ ಬೆಲೆ ಏರಿಕೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಈ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದಡಿ.ಕೆ. ಶಿವಕುಮಾರ್, ಈ ಭ್ರಷ್ಟ ಸರ್ಕಾರ ತೆಗೆಯಬೇಕು. ಜನರೇ ಅಂತಹ ತೀರ್ಮಾನ ಮಾಡಿದ್ದಾರೆ. ಈಗ ಅಮೀತ್ ಶಾ ಹೇಳುತ್ತಿದ್ದಾರೆ. ನಾವು ಭ್ರಷ್ಟ ರಹಿತ ಸರ್ಕಾರ ಕೊಡ್ತೇವೆ ಎಂದು ಗ್ಯಾಸ್ ಬೆಲೆ ಏರಿಕೆಗೆ ಖಂಡಿಸಿದ್ದಾರೆ.

 

ಇನ್ನೂ ಟಿಕೆಟ್ ಆಕಾಂಕ್ಷಿಗಳ ನಡುವೆ ಸಂಧಾನ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಸಂಧಾನದ ಕೆಲಸ ನಡೆಯುತ್ತಿದೆ. ನಮ್ಮ ನಾಯಕರು ಕರೆದು ಮಾತನಾಡುತ್ತಿದ್ದಾರೆ. ಕೆಲವರಿಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ನಾನು ಮಾತನಾಡಿದ್ದೇನೆ, ಸಂಧಾನ ಸಭೆ ಕೂಡ ಕರೆದಿದ್ದೇವೆ. ಅವರ ಅಭಿಪ್ರಾಯ ಕೇಳುತ್ತಿದ್ದೇವೆ. ಎಲ್ಲರೂ ಸೇರಿದ್ರೆ ಒಳ್ಳೆಯ ಫಲಿತಾಂಶ ಬರುತ್ತೆ. ಈಗಾಗಲೇ ಪ್ರಜಾಧ್ವನಿ ಯಾತ್ರೆ ನೋಡ್ತಾ ಇದ್ದೀರ. ಎಷ್ಟು ಸಂಖ್ಯೆಯಲ್ಲಿ ಜನ ಸೇರ್ತಾ ಇದ್ದಾರೆಂದು. ನಡ್ಡಾ ಕಾರ್ಯಕ್ರಮ ‌ಕೂಡ ಗಮನಸಿದ್ದೀರಿ. ನಾವು ಯಾರ ಬಗ್ಗೆ ಮಾತನಾಡುತ್ತಿಲ್ಲ. ನಮ್ಮ ‌ಮಾತು, ನಡೆ,ನುಡಿ ಮೇಲೆ ಮತ ಕೇಳುತ್ತಿದ್ದೇವೆ. ಸರ್ಕಾರಿ ನೌಕರರಿಗೆ ‌ನಾವು ಭರವಸೆ ಕೊಟ್ಟಿದ್ದೇವೆ. ನಾವು ಕೊಟ್ಟ ಮೇಲೆ ಸರ್ಕಾರ ಅನೌನ್ಸ್ ಮಾಡಿದೆ. ಬೆಲೆ ಏರಿಕೆಯಿಂದ ಸರ್ಕಾರಿ ನೌಕರರು ಹೆಚ್ಚಳ ಕೇಳುತ್ತಿದ್ದಾರೆ. ಸರ್ಕಾರಿ ನೌಕರರು ದಡ್ಡರಲ್ಲ, ಎಲ್ಲ ಗೊತ್ತಿದೆ. ಎನ್’ಪಿಎಸ್ ಜಾರಿ‌ ಮಾಡುವ ಬಗ್ಗೆ ‌ಮಾತನಾಡಿದ್ದೇವೆ. ಸರ್ಕಾರ ಬಂದ ಮೇಲೆ ಕ್ರಮವಹಿಸುತ್ತೇವೆ ಎಂದು ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ಹಣ ಕೊಟ್ಟು ಜನರನ್ನ ಕರೆತರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆಶಿ, ಆ ರೀತಿ ನಮ್ಮ ಪಕ್ಷದಲ್ಲಿ ಇಲ್ಲ. ಜನರೆ ಸ್ವಯಂ ಪ್ರೇರಿತರಾಗ ಬರ್ತಿದ್ದಾರೆ ಎಂದು ಹೇಳಿದ್ದಾರೆ.

ಟಿಕೆಟಿಗಾಗಿಆಕಾಂಕ್ಷಿಗಳ ಬೆಂಬಲಿಗರ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ನೋಡ್ರಿ ಆಕಾಂಕ್ಷಿಗಳು ಸಾಕಷ್ಟು ಇದ್ದಾರೆ. 1200 ಜನ ಅರ್ಜಿ ಹಾಕಿದ್ದಾರೆ. ಯಾರಿಗೆ ಅಂತ ಪಾರ್ಟಿ ತೀರ್ಮಾನ ‌ಮಾಡುತ್ತೆ. ಇದೇ 7, 8 ರಂದು ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಅಲ್ಲಿ ಕುಳಿತು ಟಿಕೆಟ್ ಬಗ್ಗೆ ತೀರ್ಮಾನಿಸುತ್ತೇವೆ. ಎಲ್ಲರೂ ಶಿಸ್ತಿನಿಂದ ಇರಬೇಕು. ಎಂಎಲ್ ಸಿ, ಚೇರ್ಮನ್ ಮಾಡುವ ಕೆಲಸ ಮಾಡುತ್ತೇವೆ. 20 ಎಂಎಲ್ ಸಿ, 150 ಬೋರ್ಡ್ ಚೇರ್ಮನ್ ಅವಕಾಶವಿದೆ. ಯಾರಿಗೆ ಟಿಕೆಟ್ ‌ಕೊಟ್ರು ‌ಕಾಂಗ್ರೆಸ್ ಗೆಲ್ಲುತ್ತೆ. ಕಾಂಗ್ರೆಸ್ ಪರವಾದ ಅಲೆ ಇದೆ. ಹಾಗಾಗಿ ಶಾಂತಿಯಿಂದ ಇರಬೇಕು ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

 


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ