ನಿಪ್ಪಾಣಿ: ‘ರಾಜ್ಯದ ಕಟ್ಟಕಡೆಯ ಗಾಯಕವಾಡಿ ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ನನ್ನ ಆಡಳಿತಾವಧಿಯಲ್ಲಿ ಗ್ರಾಮದಲ್ಲಿ ಈವರೆಗೆ ₹8.4 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲ್ಲೂಕಿನ ಗಾಯಕವಾಡಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುಮೋದನೆಗೊಂಡ ₹ 85 ಲಕ್ಷ ಅನುದಾನದ ಗಾಯಕವಾಡಿ-ಕೋಡಣಿ ಗ್ರಾಮಗಳ ನಡುವಿನ ಹಳ್ಳದ ಬ್ರಿಜ್ ಕಂ ಬ್ಯಾರೇಜ್ ಮತ್ತು ಲೋಕೋಪಯೋಗಿ ಇಲಾಖೆಯಿಂದ ವಿವೇಕ ಶಾಲಾ ಯೋಜನೆಯಡಿ ಅನುಮೋದನೆಗೊಂಡ ₹15 ಲಕ್ಷ ಅನುದಾನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಒಂದು ಕೊಠಡಿ ನಿರ್ಮಾಣ ಕಾಮಗಾರಿಗೆ ಭಾನುವಾರ ಅವರು ಚಾಲನೆ ನೀಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಲಿತಾ ತೋರಣೆ, ಉಪಾಧ್ಯಕ್ಷ ರಾಜು ಖವರೆ, ಸದಸ್ಯ ರವಿ ಖೋತ, ವಿಠ್ಠಲ್ ನಾಯಿಕ, ಸಾವಿತ್ರಿ ನಾಯಿಕ, ರಾಜೇಂದ್ರ ಕಾನಡೆ, ಶಾಂತಾಬಾಯಿ ಡೋಣೆ, ಸದಾಶಿವ ಬುಧಿಹಾಳೆ, ಆನಂದಾ ನಾಯಿಕ, ಗಣಪತಿ ಖೋತ, ರಾಜು ಶಿಂಧೆ ಇದ್ದರು.
Laxmi News 24×7