ನವದೆಹಲಿ: ಬಿಸಿಯನ್ನೂ ತಾಳಿಕೊಳ್ಳಲು ಸಾಧ್ಯವಿರುವ ಗೋಧಿ ತಳಿಯನ್ನು ಭಾರತೀಯ ಕೃಷಿ ಸಂಶೋಧನಾ ಪರಿಷತ್ತು(ಐಸಿಎಆರ್) ಅಭಿವೃದ್ಧಿಪಡಿಸಿದೆ.
ಬೇಸಿಗೆ ಸಮೀಪಿಸುತ್ತಿದೆ. ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಗೋಧಿ ಬೆಳೆಯುವ ಪ್ರದೇಶಗಳಲ್ಲಿ ತಾಪಮಾನ ಸರಾಸರಿ 3-5 ಸೆಲಿÏಯಸ್ ಏರಿಕೆಯಾಗುವ ಸಾಧ್ಯತೆಯಿದೆ.
ಕಳೆದ ವರ್ಷ ಬೇಸಿಗೆಯಲ್ಲಿ ತಾಪಮಾನ ಹೆಚ್ಚಳದಿಂದ ಗೋಧಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ಐಸಿಎಆರ್ ವಿಜ್ಞಾನಿಗಳು ಬಿಸಿಯನ್ನೂ ತಾಳಿಕೊಳ್ಳುವ ಗೋಧಿ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ.
ಜನವರಿಯಲ್ಲಿ ಏಕದಳ ಧಾನ್ಯಗಳ ಕೊರತೆ ದಾಖಲೆಯ ಶೇ. 16.12ರಷ್ಟಾಗಿತ್ತು. ಅಲ್ಲದೇ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಯಲ್ಲಿ ವಾರ್ಷಿಕ ಶೇ. 25.05ರಷ್ಟು ಏರಿಕೆಯಾಗಿದೆ. ಫೆ.1ರಂದು ಸರ್ಕಾರಿ ಗೋಧಾಮುಗಳಲ್ಲಿ 154.44 ಲಕ್ಷ ಟನ್ ಗೋಧಿ ಶೇಖರಣೆ ಇತ್ತು. ಇದು ಈ ದಿನಾಂಕದಂದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ.
ಇನ್ನೊಂದೆಡೆ, ಕಳೆದ ಮಾರ್ಚ್‌ನಲ್ಲಿ ತಾಪಮಾನ ತೀವ್ರವಾಗಿ ಏರಿಕೆಯಾಗಿತ್ತು. ಇದು ಗೋಧಿ ಇಳುವರಿ ಮೇಲೆ ಪರಿಣಾಮ ಬೀರಿತ್ತು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ತಾಪಮಾನದ ತೀವ್ರತೆಯನ್ನು ತಡೆದುಕೊಳ್ಳುವ ಗೋಧಿ ತಳಿಯನ್ನು ಐಸಿಎಆರ್ ಪ್ರಧಾನ ವಿಜ್ಞಾನಿ ರಾಜ್‌ಬೀರ್ ಯಾದವ್ ಮತ್ತವರ ತಂಡದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.