ಬೆಂಗಳೂರು : ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇಬ್ಬರ ವರ್ಗಾವಣೆ ನಡುವೆಯೇ ಮತ್ತೊಂದು ‘ವಾಟ್ಸಾಪ್ ಚಾಟ್’ ವೈರಲ್ ಆಗಿದೆ.
ಈಗಾಗಲೇ ರೋಹಿಣಿ ಸಿಂಧೂರಿಯ ಹಲವು ವಾಟ್ಸಾಪ್ ಚಾಟ್ ಲಿಸ್ಟ್ ಗಳನ್ನ ಐಪಿಎಸ್ ಅಧಿಕಾರಿ ಡಿ ರೂಪ ಬಿಡುಗಡೆ ಮಾಡಿದ್ದರು.
ಇದೀಗ ಇಬ್ಬರು ಅಧಿಕಾರಿಗಳ ವರ್ಗಾವಣೆಗೂ ಮುನ್ನ ಡಿ ರೂಪ-ಸಿ ಎಸ್ ವಂದಿತಾ ಶರ್ಮಾ ಜೊತೆ ನಡೆಸಿದ್ದರು ಎನ್ನಲಾದ ವಾಟ್ಸಪ್ ಚಾಟ್ ಲಿಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಿಎಸ್ ವಂದಿತಾ ಜೊತೆ ಮಾಡಿರುವ ವಾಟ್ಸಪ್ ಚಾಟ್ ಲಿಸ್ಟ್ ನ ಫೋಟೋಗಳಲ್ಲಿ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಕಡೆ ಅವರನ್ನು ವರ್ಗಾವಣೆ ಮಾಡಿ ಎಂದು ಸಿಎಸ್ ಗೆ ರೂಪ ಮನವಿ ಮಾಡಿದ್ದರು ಎನ್ನಲಾಗಿದೆ.ಇದಲ್ಲದೇ ಆರ್ ಎಸ್ ಎಸ್ ಪ್ರಭಾವಿ ನಾಯಕರ ಹೆಸರನ್ನ ಕೂಡ ಪ್ರಸ್ತಾಪ ಮಾಡಲಾಗಿದ್ದು, ಚಾಟ್ ಲಿಸ್ಟ್ ಫೋಟೋ ಕುತೂಹಲ ಮೂಡಿಸಿದೆ.
ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಗಲಾಟೆ ವಿಚಾರಕ್ಕೆ ರಾಜ್ಯ ಸರ್ಕಾರ ತಿರುವು ಕೊಟ್ಟಿದ್ದು, ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ರಾಜ್ಯ ಸರ್ಕಾರ ಅದೇಶ ಮಾಡಲಾಗಿದೆ.ಸ್ಥಳ ನಿಯೋಜನೆ ಮಾಡದೇ ರಾಜ್ಯ ಸರ್ಕಾರವು ಡಿ.ರೂಪಾ, ಪತಿ ಐಎಎಸ್ ಮುನೀಶ್ ಮುದ್ಗೀಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಇಬ್ಬರು ಮಹಿಳಾ ಅಧಿಕಾರಿಗಳ ಜಗಳದಲ್ಲಿ ಮೂವರಿಗೆ ತಲೆತಂಡ ಮಾಡಲಾಗಿದೆ.
ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದಂತ ಸಚಿವ ಸಂಪುಟ ಸಭೆಯಲ್ಲಿ ಐಪಿಎಸ್ ರೂಪಾ ಹಾಗೂ ಐಎಎಸ್ ರೋಹಿಣಿ ಸಿಂಧೂರಿ ನಡುವಿನ ಸಮರದ ಬಗ್ಗೆ ಬಿಸಿಬಿಸಿ ಚರ್ಚೆಯಾಗಿತ್ತು. ಅಲ್ಲದೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಚಿವರು ಆಗ್ರಹಿಸಿದ್ದರು. ಹೀಗಾಗಿ ಸಿಎಂ ಬೊಮ್ಮಾಯಿ ಸಿಎಸ್ ಗೆ ಸೂಚನೆ ನೀಡಿದ್ದರು. ಈ ಸೂಚನೆ ಹಿನ್ನಲೆಯಲ್ಲಿ ರೋಹಿಣಿ ಸಿಂಧೂರಿ ಹಾಗೂ ರೂಪಗೆ ಸರ್ಕಾರ ನೋಟಿಸ್ ಜಾರಿಗೊಳಿಸಲಾಗಿದೆ.ಈ ಕುರಿತಂತೆ ಇಂದು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ಐಪಿಎಸ್ ಅಧಿಕಾರಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರುಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಜೊತೆಗೆ ಇಬ್ಬರೂ ಮಹಿಳಾ ಅಧಿಖಾರಿಗಳನ್ನು ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.