ಬಾಗಲಕೋಟೆ: ‘ನನ್ನದು ಬಿಜೆಪಿ ವಿರುದ್ಧದ ಹೋರಾಟವಲ್ಲ. ಬಿಜೆಪಿಯಲ್ಲಿರುವ ಹಿಂದೂ ದ್ರೋಹಿಗಳು, ಅದರ ತತ್ವ, ಸಿದ್ಧಾಂತ ಹಾಳು ಮಾಡಿದವರ ವಿರುದ್ಧ ಹೋರಾಟ’ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರ್ಕಳದಲ್ಲಿ ಗೆದ್ದರೂ ಬಿಜೆಪಿಯನ್ನೇ ಬೆಂಬಲಿಸುತ್ತೇನೆ.
ಆದರೆ ಡೋಂಗಿ ಹಿಂದುತ್ವವಾದಿಗಳಿಗೆ ಬುದ್ಧಿ ಕಲಿಸಲು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದರು.
‘ನನಗೆ ಬಾಗಲಕೋಟೆ ಮತ್ತು ಕಾರ್ಕಳದಿಂದ ಸ್ಪರ್ಧಿಸಲು ಬೇಡಿಕೆ ಇತ್ತು. ಕಾರ್ಕಳವನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಕಾರ್ಕಳದಲ್ಲಿ ನೂರಕ್ಕೆ ನೂರು ನಾನೇ ಗೆದ್ದು ಹಿಂದುತ್ವದ ಪತಾಕೆ ಹಾರಿಸುತ್ತೇನೆ’ ಎಂದು ಹೇಳಿದರು.
Laxmi News 24×7