ಕಲಬುರಗಿ : ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಯಿಂದ ಹಿರಿಯ ಹಾಗೂ ಯುವ ಚಿತ್ರಕಲಾವಿದರಿಂದ ಇದೇ ಫೆಬ್ರವರಿ 24 ಹಾಗೂ 25 ರಂದು ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನದ ಮೊದಲ ಮಹಡಿಯಲ್ಲಿ ಚಿತ್ರಕಲಾ ಶಿಬಿರ ಹಾಗೂ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂದು ಕಲ್ಯಾಣ ಕರ್ನಾಟಕ ಉತ್ಸವದ ಚಿತ್ರಕಲೆ, ನೃತ್ಯ, ಪ್ರಬಂಧ, ಶಿಬಿರ/ ಪ್ರದರ್ಶನ ಸಮಿತಿಯ ಅಧ್ಯಕ್ಷರಾಗಿರುವ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಗರಿಮಾ ಪನ್ವಾರ್ ಅವರು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹಿರಿಯ ಕಲಾವಿದ ಚಂದ್ರಹಾಸ ವೈ. ಜಾಲಿಹಾಳ ಇವರನ್ನು ಸಂಪರ್ಕಿಸಬಹುದಾಗಿದೆ. ಇದಲ್ಲದೇ ಇದೇ ಫೆಬ್ರವರಿ 24 ರಿಂದ 26 ರವರೆಗೆ ಕಲ್ಯಾಣ ಕರ್ನಾಟಕದ ಹಿರಿಯ ಚಿತ್ರಕಲಾವಿದರ ಚಿತ್ರಕಲಾ ಕೃತಿಗಳ ಪ್ರದರ್ಶನವನ್ನು ಮುಖ್ಯ ವೇದಿಕೆಯ ಪಕ್ಕದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಚಿತ್ರಕಲಾ ಶಿಕ್ಷಕರಾದ ರಾಜೇಶ ನೀಲಳ್ಳಿ ಇವರ ಮೊಬೈಲ್ ಸಂಖ್ಯೆ 9845976003ಗೆ ಸಂಪರ್ಕಿಸಲು ಕೋರಲಾಗಿದೆ.
ಶಿಲಾ ಶಿಲ್ಪಕಲಾ ಶಿಬಿರ: ಉತ್ಸವದ ಅಂಗವಾಗಿ ಇದೇ ಫೆಬ್ರುವರಿ 20 ರಿಂದ 26ರವರೆಗೆ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನದ ಎದುರುಗಡೆಯಲ್ಲಿ ಶಿಲಾ ಶಿಲ್ಪಕಲಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಕಲಾವಿದ ನಿಂಗಪ್ಪ ಡಿ.ಕೇರಿ ಇವರ ಮೊಬೈಲ್ ಸಂಖ್ಯೆ 9845839188ಗೆ ಸಂಪರ್ಕಿಸಲು ಕೋರಲಾಗಿದೆ.
ಕಲ್ಯಾಣ ಕರ್ನಾಟಕ ಉತ್ಸವ-2023ರ ಮಕ್ಕಳ ಉತ್ಸವದಲ್ಲಿ ಇದೇ ಫೆಬ್ರವರಿ 25 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಮಕ್ಕಳಿಂದ ನಾಟಕೋತ್ಸವ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಉತ್ಸವದ ಚಿತ್ರಕಲೆ, ನೃತ್ಯ, ಪ್ರಬಂಧ, ಶಿಬಿರ/ ಪ್ರದರ್ಶನ ಸಮಿತಿಯ ಅಧ್ಯಕ್ಷರಾಗಿರುವ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಗರಿಮಾ ಪನ್ವಾರ್ ಅವರು ತಿಳಿಸಿದ್ದಾರೆ.