ಯಾದಗಿರಿ : ಯಾದಗಿರಿಯಲ್ಲಿ ಮದ್ಯದ ಅಮಲಿನಲ್ಲಿ ಯುವಕ ‘ಮಚ್ಚು’ ಹಿಡಿದು ರಂಪಾಟ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಪಾನಮತ್ತನಾದ ಯುವಕ ಮಚ್ಚು ಹಿಡಿದು ಸಿಕ್ಕ ಸಿಕ್ಕವರ ಮೇಲೆ ಮಚ್ಚು ಬೀಸಲು ಹೋಗಿದ್ದಾನೆ.
ಅಲ್ಲದೇ ಚಲಿಸುತ್ತಿದ್ದ ಲಾರಿಯ ಚಾಲಕ, ಬೈಕ್ ಸವಾರರು ಹಾಗೂ ರಸ್ತೆಯಲ್ಲಿ ನಿಂತವರ ಮೇಲೆ ಮಚ್ಚು ಬೀಸಿದ್ದಾನೆ,
ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಪರಿಣಾಮ ಕಾರೊಂದರ ಗಾಜು ಪುಡಿ ಪುಡಿಯಾಗಿದೆ ಎನ್ನಲಾಗಿದೆ. ನಂತರ ಪಾನಮತ್ತನಾದ ಯುವಕನನ್ನು ಹಿಡಿದು ಜನರು ಥಳಿಸಿ ನಂತರ ಪೊಲೀಸ್ ವಶಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.