Breaking News

ಖಾತೆ ಬದಲಾವಣೆಗೆ ಲಂಚ: ಪ್ರಥಮದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

Spread the love

ಳ್ಳಾರಿ (ಹೂವಿನಹಡಗಲಿ): ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಿಕೊಡಲು ಸಾವಿರಾರು ರೂ. ಲಂಚ ಕೇಳಿದ್ದ ಹಡಗಲಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ವೆಂಕಟಸ್ವಾಮಿ ಎನ್ನುವವರು ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಹಗರನೂರು ಗ್ರಾಮಾದ ನಿವೃತ್ತ ಶಿಕ್ಷಕ ಲಕ್ಕಪ್ಪಾ ಅಂಗಡಿಯವರ ತಾಯಿಗೆ ಸೇರಿದ 4 ಎಕರೆ ಜಮಿನಿಗೆ ಸಂಬಂಧಿಸಿದಂತೆ ಸರ್ವೆನಂ.

330\ಎ ಪಹಣಿ ಕಲಂ 11 ರಲ್ಲಿ ಸರ್ಕಾರಿ ಜಮಿನು ಎಂದು ಬಂದಿದ್ದು ಇದನ್ನು ತಗೆದು ಹಾಕಲು ಅರ್ಜಿದಾರ ಲಕ್ಕಪ್ಪ ಅಂಗಡಿಯ 2014 ರಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿದಿದ್ದರು. ವಿನಾಃ ಕಾರಣ ವಿಳಂಬ ಮಾಡಿ ನಂತರ ಕೆಲಸ ಮಾಡಿಕೊಡಲು 70 ಸಾವಿರ ರೂ ಗಳ ಹಣಕ್ಕೆ ಬೇಡಿಕೆ ಇಟ್ಟಿದ್ದರು ಇಂದು ಪಟ್ಟಣದ ಖಾಸಗಿ ಹೋಟಲ್ ನಲ್ಲಿ ಅರ್ಜಿದಾರರನು ವೆಂಕಟಸ್ವಾಮಿಯವರಿಗೆ 65 ಸಾವಿರ ಹಣ ನೀಡಲು ಮುಂದಾದಾಗ ಬಳ್ಳಾರಿ ಹಾಗೂ ಹೊಸಪೇಟೆ ಲೋಕಾಯುಕ್ತರು ಜಂಟಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಪುರುಷೊತ್ತಮ ಅವರ ಮಾರ್ಗದರ್ಸದಲ್ಲಿ ಡಿವೈಎಸ್ ಒಳಗೊಂಡಂತೆ ಪೊಲೀಸ್ ಇನ್ಸ್ ಪೆಕ್ಟರ್ ಸುರೇಶ್ ಬಾಬು ಹಾಗೂ ಸಂಗಮೇಶ್ ದಾಳಿ ನಡೆಸಿದ್ದಾರೆ ಆರೊಪಿ ವೆಂಕಟಸ್ವಾಮಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

 


Spread the love

About Laxminews 24x7

Check Also

ಗ್ಯಾರಂಟಿ’ಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ನಿಜ, ಆದರೆ ಅಭಿವೃದ್ಧಿ ಕಾರ್ಯ ನಿಂತಿಲ್ಲ: ಸತೀಶ್ ಜಾರಕಿಹೊಳಿ

Spread the loveಬೆಳಗಾವಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಎಂ.ಬಿ.ಪಾಟೀಲ್‌ ಅಪಸ್ವರ ಎತ್ತಿದ ಬೆನ್ನಲ್ಲೇ ಲೋಕೋಪಯೋಗಿ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ