ಗೋಕಾಕ್ : ಸಚಿವ ರಮೇಶ್ , ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ, ಸೂಚನೆಯ ಮೇರೆಗೆ ಬಿಜೆಪಿ ಮುಖಂಡರು ಕೊರೊನಾ ವಾರಿಯರ್ಸ್ ಗೆ ಇಂದು ಆರೋಗ್ಯ ಕಿಟ್ ನೀಡಿದರು.
ಕೊರೊನಾ ನಿಯಂತ್ರಣದಲ್ಲಿ ಕಳೆದ ಏಳೆಂಟು ತಿಂಗಳಿಂದ ತಮ್ಮ ಜೀವನವನ್ನು ಲೆಕ್ಕಿಸಿದೆ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ, ಪಟ್ಟಣ ಪಂಚಾಯತಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಪೊಲೀಸ್ ಇಲಾಖೆ ಸಿಬ್ಬಂದಿ ಕಿಟ್ ನೀಡಿ, ಸನ್ಮಾನಿಸಿ ಗೌರಿವಿಸಿದರು.
ಇದೇ ವೇಳೆ ಮುಖಂಡರು ಮಾತನಾಡಿ, ಗೋಕಾಕ್ ಕ್ಷೇತ್ರದಲ್ಲಿ ಸಚಿವ ರಮೇಶ್ ಜಾರಕಿಹೊಳಿ , ಅರಭಾವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಕೊರೊನಾ ವಾರಿಯರ್ಸ್ ಹಾಗೂ ಕ್ಷೇತ್ರದ ಜನರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ನಿರಂತರ ಕ್ಷೇತ್ರದಲ್ಲಿ ಮಾಸ್ಕ್, ಸ್ಯಾನಿಟೈಸರ್ ನೀಡುತ್ತಿದ್ದಾರೆ. ಜತೆಗೆ ಕೊರೊನಾ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಕೊರೊನಾ ವಾರಿಯರ್ಸ್ ಸಹ ಬೆಂಬಲವಾಗಿ ನಿಂತಿದ್ದಾರೆ. ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸೋಣ ಎಂದು ಹೇಳಿದರು.
ಈ ವೇಳೆ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮನ್ನಿಕೇರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ವಿ.ಪಾಟೀಲ, ಗ್ರಾಮದ ಹಿರಿಯ ಮುಖಂಡರಾದ ಬಸವರಾಜ, ಈಶ್ವರ ಮಟಗಾರ ಸೇರಿದಂತೆ ಇತರರು ಇದ್ದರು.