ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು, ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಲು ಹೋಗಿ ಬಂಗಾರಪ್ಪನವರ ಮನೆಯಲ್ಲಿ ದೇವೇಗೌಡರು ಜುಬ್ಬ ಹರಿಸಿಕೊಂಡು ಬಂದಿದ್ದಾರೆ. ಗೋಕರ್ಣ/ ಹಾಸನ: ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಿದ್ದು ದೇವೇಗೌಡರು, ರಾಮಕೃಷ್ಣ ಹೆಗಡೆಯನ್ನ ಮುಖ್ಯಮಂತ್ರಿ ಮಾಡಲು ಹೋಗಿ ಬಂಗಾರಪ್ಪನವರ ಮನೆಯಲ್ಲಿ ದೇವೇಗೌಡರು ಜುಬ್ಬ ಹರಿಸಿಕೊಂಡು ಬಂದಿದ್ದಾರೆ.
ರಾಜಕೀಯ ಗೊತ್ತಿಲ್ಲದ ನಳಿನ್ ಕುಮಾರ್ ಕಟೀಲ್ಗೆ ತಿಳುವಳಿಕೆ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಎಚ್.ಡಿ ಕುಮಾರಸ್ವಾಮಿ ಬ್ರಾಹ್ಮಣ ವಿರೋಧಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದರು.
ಕಟೀಲ್ ಬದಲು ಪಿಟೀಲ್ ಅಂತ ಹೆಸರು ಇಟ್ಟಿಕೊಳ್ಳುವುದು ಒಳ್ಳೆಯದು, ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಎನ್ನುವುದು ಜನರು ನಿರ್ಧರಿಸುತ್ತಾರೆ. ಬಿಜೆಪಿ ನಾಯಕರು ನಿರ್ಧರಿಸುವುದಲ್ಲ ಎಂದು ತಿರುಗೇಟು ಕೊಟ್ಟರು.
ಹಿಂದೂ ಧರ್ಮ ರಕ್ಷಣೆ ನಾವು ಮಾಡುತ್ತೇವೆ. ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರ ಬಂದವರು ಏನು ಮಾಡಿದ್ದಾರೆ ಎನ್ನುವುದು ತಿಳಿದಿದೆ ಎಂದರು.