Breaking News

ವಿಧನಾಸಭಾ ಚುನಾವಣೆಗೆ ಭಾರಿ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ : ಉಸ್ತುವಾರಿಗಳ ನೇಮಕ

Spread the love

ಬೆಂಗಳೂರು: ವಿಧನಾಸಭಾ ಚುನಾವಣೆಗೆ ಭಾರಿ ಸಿದ್ಧತೆ ನಡೆಸಿರುವ ರಾಜ್ಯ ಬಿಜೆಪಿ ಚುನಾವಣಾ ಪೂರ್ವ ಸಿದ್ಧತಾ ಕಾರ್ಯಕ್ರಮಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿ ಉಸ್ತುವಾರಿಗಳನ್ನು ನೇಮಕ ಮಾಡಿದೆ.

ಜಿಲ್ಲೆಗಳಲ್ಲಿ ಮೋರ್ಚಾ ಸಮಾವೇಶ, ಫಲಾನುಭವಿಗಳ ಸಮ್ಮೇಳನ, ವಿಡಿಯೋ ವ್ಯಾನ್ ಪ್ರಚಾರ, ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ, ರಥ ಯಾತ್ರೆಗಳಿಗೆ ಉಸ್ತುವಾರಿಗಳನ್ನು ನೀಮಕ ಮಾಡಿದೆ.

ಯಾತ್ರೆ ಪ್ರಮುಖರಾಗಿ ಸಚಿವರ ಸಿ‌ಸಿ ಪಾಟೀಲ್, ಪಕ್ಷದ ಎಲ್ಲ ಮೋರ್ಚಾಗಳ ಜಿಲ್ಲಾ ಸಮಾವೇಶ ಸಂಚಾಲಕರಾಗಿ ಬಿ.ವೈ ವಿಜಯೇಂದ್ರ, ಫಲಾನುಭವಿಗಳ ಸಮ್ಮೇಳನದ ಸಂಚಾಲಕರಾಗಿ‌ ಹಾಲಪ್ಪ ಆಚಾರ ನೇಮಕಗೊಂಡಿದ್ದಾರೆ.

ಪ್ರಣಾಳಿಕೆ ತಯಾರಿ‌ ಸಲಹಾ ಅಭಿಯಾನದ ಸಂಚಾಲಕರಾಗಿ‌ ಸಚಿವರಾದ ಸುಧಾಕರ್ ನೇಮಕಗೊಂಡಿದ್ದಾರೆ. ಸಚಿವ ಬಿ.ಸಿ.ನಾಗೇಶ, ತೇಜಸ್ವಿ ಅನಂತಕುಮಾರ, ತೇಜಸ್ವಿ ಸೂರ್ಯ, ಸುರೇಶ ಕುಮಾರ, ಅಭಯ ಪಾಟೀಲ, ಪಿ.ರಾಜೀವ, ರಾಜಕುಮಾರ ಪಾಟೀಲ, ಎನ್. ಮಹೇಶ, ಕೆ.ಎಸ್.ನವೀನ್, ಸಮೀರ ಕಾಗಲಕರ್, ಡಾ.ಪ್ರಕಾಶ, ರವೀಂದ್ರ ಪೈ, ವಿಶ್ವನಾಥ ಭಟ್, ಮಾಳವಿಕ ಅವಿನಾಶ ಸಮಿತಿಯಲ್ಲಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ