ಇಂಡಸ್ ಇಂಡ್ ಬ್ಯಾಂಕ್ ವತಿಯಿಂದ ಜನವರಿ 31 ರಿಂದ ಮಾರ್ಚ್ 10 ರವರೆಗೆ ರಾಷ್ಟ್ರೀಯ ಅಂಧರ ಟಿ-20 ಕ್ರಿಕೆಟ್ ಪಂದ್ಯಾವಳಿ ಆಯೋಜನೆ
ಇದೇ ಫೆ. 5ರಿಂದ 9ರವರೆಗೆ ನಗರದ ಕೆ.ಎಸ್.ಸಿ.ಎ ಮೈದಾನದಲ್ಲಿ ನಾಗೇಶ ಟ್ರೋಪಿ ಟಿ-20 ಕ್ರಿಕೆಟ್ ಪಂದ್ಯಾವಳಿಯು ನಡೆಯಲಿದೆ ಎಂದು
ಸಂಸ್ಥೆಯ ಸಂಸ್ಥಾಪಕ ಡಾ. ಮಹಾಂತೇಶ ಕಿವಡಸನ್ನವರ ಅವರು ಹೇಳಿದರು.
ವೈ.ಓ: ಸೋಮವಾರ ಬೆಳಗಾವಿಯ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಕ್ರಿಕೆಟ್ ಅಸೋಸಿಯೆಷನ್ ಫಾರ್ ದ್ ಬ್ಲೈಂಡ್ ಇನ್ ಇಂಡಿಯಾ ಇವರ ಸಹಯೋಗದಲ್ಲಿ ಇದೇ ಫೆ. 5ರಿಂದ 9ರವರೆಗೆ ನಗರದ ಕೆ.ಎಸ್.ಸಿ.ಎ ಮೈದಾನದಲ್ಲಿ ನಾಗೇಶ ಟ್ರೋಪಿ ಕ್ರಿಕೆಟ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಡಾ. ಮಹಾಂತೇಶ ಕಿವಡಸನ್ನವರ ಹೇಳಿದರು.ಬ್ಯಾಂಕ್ ನಾಗೇಶ್ ಟ್ರೋಫಿ ಅಂಧರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿಯು 2022-23ರ 5ನೇ ಆವೃತ್ತಿಯು ಜನವರಿ 31 ರಿಂದ ಮಾರ್ಚ್ 10 ರವರೆಗೆ ದೇಶದ 7 ವಿವಿಧ ನಗರಗಳಲ್ಲಿ ನಡೆಯಲಿದ್ದು ಇದರಲ್ಲಿ ಬೆಳಗಾವಿಯು ಸೇರಿದಂತೆ
ನೇರೆಯ ರಾಜ್ಯಗಳಾದ ಚಂಡೀಗಢ, ಪಾಂಡಿಚೇರಿ, ಚೆನ್ನೈ, ಅಜ್ಮೀರ್, ಜಬಲ್ಪುರ್ ಮತ್ತು ಮುಂಬೈ ತಂಡಗಳ ಕ್ರೀಡಾಪಟುಗಳು 69 ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದಾರೆ. ತಂಡಗಳನ್ನು 6 ಗುಂಪುಗಳಾಗಿ ವಿಂಗಡಿಸಲಾಗಿದೆ, ಇದರಲ್ಲಿ 4 ಗುಂಪುಗಳು ತಲಾ ಐದು ತಂಡಗಳನ್ನು ಹೊಂದಿವೆ ಮತ್ತು ಎರಡು ಗುಂಪುಗಳು ಪಂದ್ಯಾವಳಿಯ ಹಿಂದಿನ ಆವೃತ್ತಿಯ ಶ್ರೇಯಾಂಕದ ಆಧಾರದ ಮೇಲೆ ತಲಾ 4 ತಂಡಗಳನ್ನು ಹೊಂದಿವೆ. ಫೆಬ್ರವರಿ 5ರಿಂದ 9ರವರೆಗೆ ಕರ್ನಾಟಕದ ಬೆಳಗಾವಿಯ ಕೆಎಸ್ ಸಿಎ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಗೋವಾ ಮತ್ತು ಹಾಲಿ ರನ್ನರ್ ಅಪ್ ಕರ್ನಾಟಕ ತಂಡವನ್ನು ಒಳಗೊಂಡಿದೆ.