ಕೋಲಾರ : ಲಂಚ ಸ್ವೀಕರಿಸುತ್ತಿದ್ದ ಮುಳಬಾಗಿಲು ಸಹಾಯಕ ಇಂಜಿನಿಯರ್ ರವೀಂದ್ರ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲಿನ ಪಂಚಾಯತ್ ರಾಜ್ ವಿಭಾಗದ ಸಹಾಯಕ ಇಂಜಿನಿಯರ್ ರವೀಂದ್ರ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಾಲಾ ಕಟ್ಟದ ಗುತ್ತಿಗೆ ಕಾಮಗಾರಿಗೆ 3 ಲಕ್ಷ ಹಣ ಬಿಡುಗಡೆಗೆ 5 % ಕಮಿಷನ್ ಗೆ ಸಹಾಯಕ ಎಂಜಿನಿಯರ್ ರವೀಂದ್ರ ಕುಮಾರ್ ಬೇಡಿಕೆಯೊಡ್ಡಿದ್ದರು. ಗುತ್ತಿಗೆದಾರ ನಾರಾಯಣ ಸ್ವಾಮಿ ಎಂಬುವವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.