ಬೆಂಗಳೂರು : ನನಗೆ 2 ಬಾರಿ ಹೃದಯ ಚಿಕಿತ್ಸೆ ಆಗಿದೆ, ಎಷ್ಟು ದಿನ ಬದುಕ್ತಿನೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ನನ್ನ ಪರ ಜೈಕಾರ ಹಾಕುತ್ತೀರಿ ಕೂಗುತ್ತೀರಿ, ಆದ್ರೆ ಓಟು ಹಾಕುವುದಿಲ್ಲ.
ಇದರಲ್ಲಿ ನಮ್ಮದು ತಪ್ಪಿದೆ, ಅಭ್ಯರ್ಥಿ ಹಾಕುವುದರಲ್ಲಿ ಎಡವಿದ್ದೇವೆ. ಕುಷ್ಟಗಿಯ ತುಕಾರಾಂ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಕನಕಗಿರಿಯ ಅಶೋಕ್ ಕೆಲಸ ನಮಗೆ ಸಮಾಧಾನ ತಂದಿಲ್ಲ ಎಂದರು. ನನಗೆ 2 ಬಾರಿ ಹೃದಯ ಚಿಕಿತ್ಸೆ ಆಗಿದೆ, ಎಷ್ಟು ದಿನ ಬದುಕ್ತಿನೋ ಗೊತ್ತಿಲ್ಲ. ನಿಮ್ಮ ಬದುಕು ಸರಿಪಡಿಸೋದೆ ನನ್ನ ಗುರಿಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.