ಬೆಳಗಾವಿ: ರಾಜಕೀಯಕ್ಕೆ ಬರುವ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಕನಕಪುರದಲ್ಲಿ 100 ರೂಪಾಯಿಗೆ ಅಶ್ಲೀಲ ಚಿತ್ರಗಳನ್ನು (ಬ್ಲ್ಯೂಫಿಲ್ಮ್) ತೋರಿಸುತ್ತಿದ್ದರು ಎಂದು ಮಾಜಿ ಸಚಿವರಮೇಶ್ ಜಾರಕಿಹೊಳಿ(Ramesh Jarakiholi) ಗಂಭೀರ ಆರೋಪ ಮಾಡಿದ್ದಾರೆ. ಸಿಡಿ ಪ್ರಕರಣದ (CD Case) ವಿಚಾರವಾಗಿ ತನ್ನ ವಿರುದ್ಧ ನಡೆದ ಷಡ್ಯಂತರದ ಬಗ್ಗೆ ಇಂದು ಸರಣಿ ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಅವರ ಈ ಪ್ರಕರಣದ ಬಗ್ಗೆ ಕಾಂಗ್ರೆಸ್ನ ಯಾವೊಬ್ಬ ನಾಯಕ ಕೂಡ ಮಾತನಾಡುತ್ತಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಇದೀಗ ಜಿದ್ದಾಜಿದ್ದಿಗೆ ಬಿದ್ದಿರುವ ರಮೇಶ್ ಜಾರಕಿಹೊಳಿ, ಮೇಲಿಂದ ಮೇಲೆ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಐಟಿ, ಇಡಿ ದಾಳಿಗಳಲ್ಲಿಕೋಟ್ಯಾಂತರ ರೂಪಾಯಿ ಹಣ ಜಪ್ತಿ ಮಾಡಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ತನ್ನ ವಿರುದ್ಧ ಮಾಡಿದ ಸಿಡಿ ಷಡ್ಯಂತರದ ಹಿಂದೆ ಡಿ.ಕೆ.ಶಿವಕುಮಾರ್ ಮತ್ತು ಕಂಪನಿ ಇದೆ ಎಂದು ಆರೋಪಿಸಿದ್ದರು. ಇದೀಗ ಅಶ್ಲೀಲ ಸಿನಿಮಾ ಪ್ರದರ್ಶನದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸುದ್ದಿಗೋಷ್ಠಿ ನಡೆಸಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಮಾಡಿದ ಆರೋಪದ ಬಗ್ಗೆ ಖಂಡನೆ ವ್ಯಕ್ತಪಡಿಸಿದರು. ಇದಕ್ಕೆ ಎರಡನೇ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಚನ್ನರಾಜ ಹಟ್ಟಿಹೊಳಿಗೆ ನೈತಿಕತೆ ಇಲ್ಲ. ಸಿಡಿ ಗ್ಯಾಂಗ್ ಕ್ಯಾಪ್ಟನ್ ಇಟ್ಟುಕೊಂಡು ರಾಜಕೀಯ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಇಂತಹ ಫ್ರಾಡ್ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದಿಂದ ರಾಜಕೀಯ ಮಾಡಲಾಗುತ್ತಿದೆ. ಸಿಡಿ ಮಾಸ್ಟರ್‌ಗೆ ಅಧಿಕಾರ ಸಿಕ್ಕರೆ ರಾಜ್ಯದ ಗತಿ ಏನು ಅಂತಾ ಪ್ರಶ್ನೆ ಮಾಡಿದ ರಮೇಶ್, ಸಿಡಿ ಬ್ಲ್ಯಾಕ್ಮೇಲ್ ಮಾಡುವವನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಆತನನ್ನು ರಾಜಕೀಯವಾಗಿ ಮುಗಿಸಲು ಇದು ನನ್ನ ಮೊದಲ ಅಸ್ತ್ರ. ಸಿಡಿ ಇಟ್ಟುಕೊಂಡು ಎಲ್ಲರನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ. ರಾಜಕೀಯಕ್ಕೆ ಬರುವ ಮೊದಲು ಕನಕಪುರದಲ್ಲಿ ಡಿಕೆಶಿ 100 ರೂ.ಗೆ ಬ್ಲ್ಯೂಫಿಲ್ಮ್ ತೋರಿಸುತ್ತಿದ್ದ. ಈ ಬಗ್ಗೆ ಕಾಂಗ್ರೆಸ್ನ ಯಾವೊಬ್ಬ ನಾಯಕ ಕೂಡ ಮಾತನಾಡುತ್ತಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಡಿಕೆಶಿ ಬಗ್ಗೆ ಮಾತನಾಡುತ್ತಿಲ್ಲ. ನಾನು ಯಾವುದೇ ಗಿಮಿಕ್ ಮಾಡುತ್ತಿಲ್ಲ ಎಂದರು.
ಸಿಡಿ ಮಾಸ್ಟರ್‌ಗೆ ಅಧಿಕಾರ ಸಿಕ್ಕರೆ ರಾಜ್ಯದ ಗತಿ ಏನು ಅಂತಾ ಪ್ರಶ್ನೆ ಮಾಡಿದ ರಮೇಶ್, ಡಿಕೆ ಶಿವಕುಮಾರ್ ಸಿಡಿ ಇಟ್ಕೊಂಡು ಬ್ಲಾಕ್‌ಮೇಲ್ ರಾಜಕಾರಣವನ್ನು ಮಾಡುತ್ತಿದ್ದಾರೆ. ಅವರ ಮುಂದೆ ಸಿದ್ದರಾಮಯ್ಯ ಅಂತವರೇ ಮಾತಾಡಲು ಆಗುತ್ತಿಲ್ಲ. ಎಲ್ಲರನ್ನೂ ಸಿಡಿ ಮೂಲಕವೇ ಆಪರೇಟ್ ಮಾಡುತ್ತಿರುವುದು ಡಿ.ಕೆ.ಶಿವಕುಮಾರ್ ಎಂದು ಆಪಾದನೆ ಮಾಡಿದರು.