ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಆರ್.ಡಿ.ಪಾಟೀಲ ಶುಕ್ರವಾರ ಮಧ್ಯರಾತ್ರಿ ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿ, ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
7 ನಿಮಿಷ 14 ಸೆಕೆಂಡ್‌ಗಳ ವಿಡಿಯೊದಲ್ಲಿ ಪಾಟೀಲ, ‘8-9 ತಿಂಗಳು ಕೆಲ ರಾಜಕೀಯ ಮುಖಂಡರು ಕುತಂತ್ರದಿಂದ ನನ್ನನ್ನು ಹಾಗೂ ನನ್ನ ಸಹೋದರ ಮಹಾಂತೇಶ ಪಾಟೀಲ ಅವರನ್ನು ಪಿಎಸ್‌ಐ ಪ್ರಕರಣದಲ್ಲಿ ಉದ್ದೇಶ ಪೂರ್ವಕವಾಗಿ ಸಿಲುಕಿಸಿದ್ದಾರೆ.
ಸಮಾಜ ಸೇವೆ, ಚುನಾವಣಾ ಸ್ಪರ್ಧೆಗೆ ಬರಬಹುದು ಎಂಬ ಭಯದಿಂದ ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ’ ಎಂದು ಹೇಳಿದ್ದಾನೆ.
‘ಈಗ ಅಫಜಲಪುರ ಕ್ಷೇತ್ರದ ಜನರು ನನಗೆ ಅವಕಾಶ ಮಾಡಿಕೊಟ್ಟರೆ, ಅವರು ಬಯಸಿದರೆ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ’ ಎಂದು ವಿವರಿಸಿದರು.