Breaking News

: ಡ್ರಗ್ಸ್ ಡೀಲ್ ಪ್ರಕರಣಕ್ಕೆ ಶೀಘ್ರವೇ ಸ್ಫೋಟಕ ಟ್ವಿಸ್ಟ್ ದೊರೆಯಲಿದ್ದು, ಸ್ಯಾಂಡಲ್‍ವುಡ್‍ ಸ್ಟಾರ್ ನಟನಿಗೆ ದೊಡ್ಡ ಶಾಕ್ ಒಂದು ಕಾದಿದೆ.

Spread the love

ಬೆಂಗಳೂರು: ಡ್ರಗ್ಸ್ ಡೀಲ್ ಪ್ರಕರಣಕ್ಕೆ ಶೀಘ್ರವೇ ಸ್ಫೋಟಕ ಟ್ವಿಸ್ಟ್ ದೊರೆಯಲಿದ್ದು, ಸ್ಯಾಂಡಲ್‍ವುಡ್‍ಗೆ ಅತಿ ದೊಡ್ಡ ಶಾಕ್ ಒಂದು ಕಾದಿದೆ.

ಇದು ಸಿಸಿಬಿ ಅಲ್ಲ, ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‍ಸಿಬಿ)ಯ ದೊಡ್ಡ ಕಾರ್ಯಾಚರಣೆಯಾಗಿದೆ. ಈ ಮೂಲಕ ಡ್ರಗ್ ಕೇಸಿನಲ್ಲಿ ಎನ್‍ಸಿಬಿ ಸೈಲೆಂಟ್ ಆಗಿ ಕೆಲಸ ಮಾಡುತ್ತಿದ್ದು, ಶೀಘ್ರವೇ ಸ್ಯಾಂಡ್‍ಲವುಡ್‍ನ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹೊರಬೀಳಲಿದೆ.

ಕಾರ್ಪೊರೇಟರ್ ಮಗ ಯಶಸ್ ‘ಸ್ಟಾರ್ ನಟ’ನ ಹೆಸರು ಹೇಳಿದ್ದಾನೆ. ಹೀಗಾಗಿ ಸದ್ಯದಲ್ಲೇ ಕನ್ನಡದ ದೊಡ್ಡ ನಟನಿಗೆ ಶಾಕ್ ಸಿಗಲಿದೆ. ಯಶಸ್ ಹೇಳಿಕೆ ಆಧರಿಸಿ ಎನ್‍ಸಿಬಿ ದೊಡ್ಡ ನಟನ ಬೆನ್ನುಬಿದ್ದಿದೆ. ಸ್ಟಾರ್ ನಟ ಆಗಿರೋದ್ರಿಂದ ಪ್ರಬಲ ಸಾಕ್ಷ್ಯಕ್ಕೆ ಎನ್‍ಸಿಬಿ ಶೋಧ ನಡೆಸುತ್ತಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಯಾಂಡಲ್‍ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಹಾಗೂ ಇವರ ಆಪ್ತರು ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಬ್ಬರೂ ನಟಿಯರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 23ರವರೆಗೆ ವಿಸ್ತರಿಸಿ ಡಿಪಿಎಸ್ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. ಈ ಆದೇಶದೊಂದಿಗೆ ಇಬ್ಬರೂ ನಟಿಯರು 23ರವರೆಗೂ ಜೈಲುಶಿಕ್ಷೆ ಅನುಭವಿಸುವುದು ಪಕ್ಕಾ ಆಗಿದೆ. 

ಇತ್ತ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಕಂ ನಟಿ ಅನುಶ್ರೀ ಕೂಡ ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ. ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಅನುಶ್ರೀ ಅವರ ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರಾಜ್ಯದ ಪ್ರಭಾವಿ ನಾಯಕರಿಗೆ ಕರೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿತ್ತು. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ಮೊಬೈಲ್ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅನುಶ್ರೀ ಅವರಿಗೆ ನೋಟಿಸ್ ಬಂದ ದಿನ ಮತ್ತು ಮಾರನೇ ದಿನ ರಾಜ್ಯದ ಮೂವರು ಪ್ರಭಾವಿಗಳಿಗೆ ಕರೆ ಮಾಡಿದ್ದಾರೆ. ಮೂವರು ಪ್ರಭಾವಿಗಳಿಗೆ ಕರೆ ಮಾಡಿ ಹೆಚ್ಚು ಸಮಯ ಮಾತನಾಡಿದ್ದಾರೆ ಎಂಬ ಮಾಹಿತಿ ಲಭಿಸಿತ್


Spread the love

About Laxminews 24x7

Check Also

ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆಯ ಅಬ್ಬರ

Spread the love ಬೆಂಗಳೂರು: ನಗರದಲ್ಲಿ ತಡರಾತ್ರಿ ನಿರಂತರವಾಗಿ ಸುರಿದ ಮಳೆ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ಶುಕ್ರವಾರ ರಾತ್ರಿ 9 ಗಂಟೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ