Breaking News

ಡಬಲ್ ಇಂಜಿನ್ ಸರ್ಕಾರದಲ್ಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವೇ ಬರುತ್ತಿಲ್ಲ

Spread the love

ಬೆಂಗಳೂರು: ಇನ್ನೂ ಕೆಲವೇ ದಿನಗಳಲ್ಲಿ ರಾಜ್ಯದ ಚುನಾವಣೆ ಬರಲಿದೆ. ಪ್ರತಿಪಕ್ಷಗಳ ಮೇಲೆ ಜವಾಬ್ದಾರಿ ಇದೆ. ರಾಜ್ಯದ ಜನರಿಗೆ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯಗಳನ್ನ ತೆರದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರ ಬಂದ್ರೆ ಅಭಿವೃದ್ಧಿ ರಾಜ್ಯವಾಗುತ್ತೆ , ಅನುದಾನ ಹೆಚ್ಚು ಸಿಗುತ್ತೆ ಎಂದು ಬಿಜೆಪಿ ಭರವಸೆ ನೀಡಿ ಓಟು ಹಾಕಿಸಿಕೊಂಡಿದೆ.

ಆದ್ರೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರದಲ್ಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವೇ ಬರುತ್ತಿಲ್ಲ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ದಿಸೆಯಿಂದ ನನ್ನ ರಾಜಕೀಯ ಪ್ರಾರಂಭವಾಗಿ ಸುಮಾರು 48 ವರ್ಷಗಳನ್ನ ಪೂರೈಸಿದ್ದೇನೆ.ನಾ ಸು ಹರ್ಡಿಕರ್ಅವರ ಆದರ್ಶಗಳನ್ನು ಪಾಲಿಸುತ್ತಾ, ಗಾಂಧಿ ಟೋಪಿಯನ್ನ ಧರಿಸುವ ಮೂಲಕ ನನ್ನ ರಾಜಕೀಯ ಜೀವನ ಪ್ರಾರಂಭವಾಯಿತು.

ದೇಶ ಸುತ್ತಾಡಿ ಪಕ್ಷದ 19 ರಾಜ್ಯದ ಉಸ್ತುವಾರಿಯಾಗಿ ಸಾಕಷ್ಟು ಅನುಭವಗಳ ಪಡೆದಿದ್ದೇನೆ. ಇಪ್ಪತ್ತೈದು ವರ್ಷಗಳ ಕಾಲ ದೆಹಲಿಯಲ್ಲಿ ರಾಜಕಾರಣ ಮಾಡಿರುವ ಅನುಭವ ಎಂದೂ ಮರೆಯಲು ಸಾಧ್ಯವಿಲ್ಲ. ದೆಹಲಿಯ ಕೇಂದ್ರವಾಗಿಟ್ಟುಕೊಂಡು ಎಲ್ಲಾ ರಾಜ್ಯಗಳ ರಾಜಕೀಯ ವಿದ್ಯಮಾನವನ್ನ ಗ್ರಹಿಸುವ ಅನುಭವವೇ ಅದ್ಭುತ. ಅದೊಂದು ಸಾಗರವಿದ್ದಂತೆ. ಸೇವಾದಳದ ರಾಷ್ಟ್ರೀಯ ಅಧ್ಯಕ್ಷನಾಗಿ ಮೊದಲ ಬಾರಿಗೆ ದೇಶವನ್ನ ಸುತ್ತಾಡುವುದು, ರಾಜಕೀಯವನ್ನ ನೋಡುವಂತಹ ಅವಕಾಶ ದೊರೆಯಿತು.

 

ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ, ಯೂತ್ ಕಾಂಗ್ರೆಸ್ ಘಟಕಗಳ ರಾಷ್ಟ್ರೀಯ ಮುಂಚೂಣಿ ನಾಯಕತ್ವವಹಿಸಿಕೊಂಡು ಪಕ್ಷ ಸಂಘಟನೆ ಮಾಡಿದೆ. ನಾನೆಂದು ಸರ್ಕಾರದ ಅಧಿಕಾರವನ್ನ ಪಡೆದಿಲ್ಲ. ಒಮ್ಮೆ ಮಾತ್ರ ಬೋರ್ಡ್ ಅಧ್ಯಕ್ಷನಾಗಿದ್ದೆ. ಈಗ ಪರಿಷತ್ ನ ವಿಪಕ್ಷ ನಾಯಕನಾಗಿ ನನ್ನ ಸಕ್ರಿಯ ರಾಜಕೀಯ ಮುಂದುವರೆದಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ