Breaking News

ಈ ಖತರ್ನಾಕ್​ ಕಳ್ಳರ ಟಾರ್ಗೆಟ ಮೊಬೈಲ್​​ ಟವರ್​​

Spread the love

ಬೆಂಗಳೂರು: ಮೊಬೈಲ್ ಟವರ್​ಗಳನ್ನೇ ಟಾರ್ಗೇಟ್ ಮಾಡಿ RRU ಕಾರ್ಡ್​ಗಳನ್ನು ಇಬ್ಬರು ಖತರ್ನಾಕ ಕಳ್ಳರು ಕಳ್ಳತನ ಮಾಡುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಬ್ಬರು ಖತರ್ನಾಕ ಕಳ್ಳರು ಟವರ್ ಬಳಿ RRU ಕಾರ್ಡ್ ಕಳ್ಳತನ ಮಾಡುತ್ತಿದ್ದರು. ಕೆಂಗೇರಿ, ನಾಗರಬಾವಿ, ಚಂದ್ರಲೇಔಟ್, ಪದ್ಮನಾಭನಗರ ಸೇರಿದಂತೆ ಹಲವೆಡೆ ಕಳ್ಳತನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಮೌಲ್ಯದ RRU (Riote Radio Unit) ಕಳ್ಳತನ ಮಾಡಿದ್ದಾರೆ. ಈ ಘಟನೆ ಸಂಬಂಧ ಇಂಡಸ್ ಟವರ್ ಕಂಪನಿಯವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸ್​​ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


Spread the love

About Laxminews 24x7

Check Also

ATM ವಾಹನ ದರೋಡೆ ಪ್ರಕರಣದಲ್ಲಿ ಮಹತ್ವದ ಲೀಡ್ ಸಿಕ್ಕಿದೆ: ಸಚಿವ ಪರಮೇಶ್ವರ್

Spread the loveಬೆಂಗಳೂರು: ಎಟಿಎಂ ವಾಹನ ದರೋಡೆ ಪ್ರಕರಣ ಸಂಬಂಧ ಬಹಳ ಮುಖ್ಯ ಲೀಡ್ ಸಿಕ್ಕಿದೆ ಎಂದು ಗೃಹ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ