ತೆಲಸಂಗ: ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ 1979ನೇ ಬ್ಯಾಚಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶನಿವಾರ ನಡೆಯಿತು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಭಾಸ ಸಜ್ಜನ, ‘ನಮ್ಮ ಶಿಕ್ಷಕರು ಕೇವಲ ಪಠ್ಯ ಬೋಧಿಸಲಿಲ್ಲ.
ಜೀವನದಲ್ಲಿ ಎದುರಾಗಬಹುದಾದ ಕಷ್ಟ ಹೇಗೆ ಎದುರಿಸಬೇಕೆಂದು ಕಲಿಸಿದರು. ಮಾದರಿಯಾಗಿ ನಮ್ಮ ಬದುಕು ರೂಪಿಸಿದರು’ ಎಂದು ಸ್ಮರಿಸಿದರು.
ಓಗೆಪ್ಪ ಅರಟಾಳ, ಸಾವಿತ್ರಿ ಹಿರೇಮಠ, ಉಮಾ ಪೋತದಾರ, ಶಾಲೆಯಲ್ಲಿ ತಾವು ಕಳೆದ ಬಾಲ್ಯದ ದಿನಗಳನ್ನು ಮೆಲಕು ಹಾಕಿದರು. ನಿವೃತ್ತ ಪ್ರಾಚಾರ್ಯ ಜಿ.ಎಂ.ಬೈರೋಡಗಿ, ಐ.ಎಂ.ಗದಗ, ಐ.ಎನ್.ಇಂಚಗೇರಿ, ಎಂ.ಡಿ.ಗಲಗಲಿ, ಬಿ.ಜಿ.ಸಾರ್ವಾಡ, ಕೆ.ಎನ್.ಬಿರಾದಾರ, ಬಿ.ಎನ್.ಅವಟಿ, ಎಸ್.ಜಿ.ದೊಡ್ಡಮನಿ, ಬಿ.ಕೆ. ಭಜಂತ್ರಿ, ಜಿ.ಸಿ.ಹಂದಿಗನೂರ, ಜಿ.ಎಸ್.ಗಂಗಾಧರ, ಎಂ.ಬಿ.ಬಿರಾದರ, ಎಂ.ಎಸ್.ಹತ್ತಿ, ಮಂದಾಕಿನಿ ಅಲಿಬಾದಿ, ಗೀತಾ ಇಂಚಗೇರಿ, ಸುಶೀಲಾ ಪಟ್ಟಣಶೆಟ್ಟಿ ಇದ್ದರು.