Breaking News

ವೇಷದ ಜತೆಗೆ ಭಾಷೆಯನ್ನೂ ಬದಲಾಯಿಸಿದ್ದ ಸ್ಯಾಂಟ್ರೋ ರವಿ! ಈತನ ಮಾತು ಕೇಳಿ ಪೊಲೀಸರೇ ಅರೆಕ್ಷಣ ಗಲಿಬಿಲಿ

Spread the love

ಮೈಸೂರು: ಅತ್ಯಾಚಾರ, ಪತ್ನಿಗೆ ವಂಚನೆ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಗುಜರಾತ್​ನ ಅಹಮದಾಬಾದ್​ನಲ್ಲಿ ತಲೆಮರೆಸಿಕೊಂಡಿದ್ದ. 11 ದಿನದ ಬಳಿಕ ಪೊಲೀಸರು ಆತನನ್ನು ಪತ್ತೆ ಮಾಡಿ ಮೈಸೂರಿಗೆ ಕರೆತಂದಿದ್ದಾರೆ.

ಬಂಧನದ ವೇಳೆಯೂ ಅಹಮದಾಬಾದ್​ನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದ. ಪೊಲೀಸರಿಗೆ ತನ್ನ ಗುರುತು ಸಿಗಬಾರದು ಎಂಬ ಕಾರಣಕ್ಕೆ ಆತ ತನ್ನ ವೇಷ ಬದಲಾಯಿಸಿದ್ದು ಮಾತ್ರವಲ್ಲದೆ ಭಾಷೆಯನ್ನೂ ಬದಲಾಯಿಸಿದ್ದ!

ತಲೆಯ ವಿಗ್​ ತೆಗೆದು ಮೀಸೆ ಬೋಳಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ಗುರುತಿರುಸುವುದು ಕಷ್ಟವಾಗಿತ್ತು. ಪೊಲೀಸರು ಸ್ಯಾಂಟ್ರೋ ರವಿಯನ್ನು ವಶಕ್ಕೆ ಪಡೆಯುವ ವೇಳೆ ಕನ್ನಡದಲ್ಲಿ ಮಾತನಾಡಿಸಿದಾಗ ‘ನನಗೆ ಕನ್ನಡ ಗೊತ್ತಿಲ್ಲ, ಹಿಂದಿಯಲ್ಲಿ ಮಾತನಾಡಿ’ ಎಂದಿದ್ದ. ಅರೆಕ್ಷಣ ಪೊಲೀಸರೇ ಗಲಿಬಿಲಿಗೊಂಡಿದ್ದರು.

ನಂತರ ಆತನನ್ನು ವಶಕ್ಕೆ ಪಡೆದು ಪೊಲೀಸ್​ ಭಾಷೆಯಲ್ಲಿ ಕೇಳಿದಾಗ ಕನ್ನಡದಲ್ಲಿ ಮಾತನಾಡಿದ ಆರೋಪಿಯು ತಾನು ಸ್ಯಾಂಟ್ರೋ ರವಿ ಎಂದು ಒಪ್ಪಿಕೊಂಡ. ಹಿಂದಿಯಲ್ಲಿ ಮಾತನಾಡಿ ಮೈಸೂರು ಪೊಲೀಸರನ್ನು ಯಾಮಾರಿಸಿಲು ಯತ್ನಿಸಿದ್ದ ಕೊನೆಗೂ ಸಿಕ್ಕಿಬಿದ್ದ.

ಏನಿದು ಪ್ರಕರಣ?: 2019ರಲ್ಲಿ ಕೆಲಸ ನೀಡುವ ಭರವಸೆ ನೀಡಿ ಮೋಸದಿಂದ ವಿವಾಹವಾಗಿದ್ದ ಸ್ಯಾಂಟ್ರೋ ರವಿ ವಿರುದ್ಧ ದೌರ್ಜನ್ಯಕ್ಕೆ ವಂಚನೆ ಮತ್ತು ಒಳಗಾಗಿದ್ದ ದಲಿತ ಯುವತಿ ಜ.2 ರಂದು ವಿಜಯನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಕೆಲಸ ನೀಡುವ ಭರವಸೆ ನೀಡಿದ್ದ ಸ್ಯಾಂಟ್ರೋ ರವಿ ಆಕೆಗೆ ಜ್ಯೂಸ್​ನಲ್ಲಿ ಮತ್ತು ಬರುವ ಔಷಧ ಬೆರೆಸಿ ನಂತರ ಅತ್ಯಾಚಾರ ನಡೆಸಿದ್ದ. ನಂತರ ಆಕೆಗೆ ಕೊಲೆ ಬೆದರಿಕೆಯೊಡ್ಡಿ ಬಲವಂತವಾಗಿ ವಿವಾಹವಾಗಿದ್ದ. ವಿವಾಹದ ಬಳಿಕ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದ. ಅಲ್ಲದೆ ಆಕೆ ಹಾಗೂ ಆಕೆಯ ತಂದೆಗೆ ಜಾತಿ ನಿಂದನೆ ಮಾಡಿದ ಆರೋಪವನ್ನೂ ಸ್ಯಾಂಟ್ರೋ ರವಿ ಎದುರಿಸುತ್ತಿದ್ದಾನೆ.

ಒಂದು ಪ್ರಕರಣದ ವಿಚಾರಣೆ: ಅತ್ಯಾಚಾರ, ವಂಚನೆ ಪ್ರಕರಣದಡಿ ಸ್ಯಾಂಟ್ರೋ ರವಿ ಬಂಧಿತನಾಗಿದ್ದು, ಸದ್ಯ ಈ ಪ್ರಕರಣದ ವಿಚಾರಣೆಯನ್ನು ಮಾತ್ರ ಪೊಲೀಸರು ಕೈಗೊತ್ತಿಕೊಂಡಿದ್ದಾರೆ. ಶನಿವಾರ ದಿನವಿಡೀ ಈ ಪ್ರಕರಣದ ಕುರಿತು ಮಾತ್ರ ಪೊಲೀಸ್​ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಈತ ಹಿರಿಯ ಪೊಲೀಸ್​ ಅಧಿಕಾರಿಗಳು, ರಾಜಕಾರಣಿಗಳೊಂದಿಗೆ ಹೊಂದಿರುವ ನಂಟು ಹಾಗೂ ಅವರೊಂದಿಗೆ ನಡೆಸಿರುವ ವ್ಯವಹಾರದ ಕುರಿತ ವಿಚಾರಣೆ ನಡೆಸಿಲ್ಲ.

ವಿಜಯನಗರ ಪೊಲೀಸ್​ ಠಾಣೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ಮಾತ್ರ ವಿಚಾರಣೆ ನಡೆಯುತ್ತಿದೆ. ಬೇರೆ ವಿಚಾರಗಳ ಬಗ್ಗೆ ಆರೋಪಿಯನ್ನು ನಾವು ಪ್ರಶ್ನಿಸಿಲ್ಲ. ಆತ ವಿಚಾರಣೆಗೆ ಸಹಕರಿಸುತ್ತಿದ್ದಾನೆ ಎಂದು ಎಡಿಜಿಪಿ ಅಲೋಕ್​ ಕುಮಾರ್​ ತಿಳಿಸಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ