Breaking News

ಮಗಳನ್ನು ಕೊಂದು ರಾತ್ರೋರಾತ್ರಿ ಸುಟ್ಟು ಹಾಕಿದ ತಂದೆ-ತಾಯಿ

Spread the love

ತಂದೆ ಮತ್ತು ಮಲ ತಾಯಿ ಸೇರಿಕೊಂಡು 17 ವರ್ಷದ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಒಡಿಶಾದ ಪುರಿ ಜಿಲ್ಲೆಯ ಗೋಪ್​ ಪ್ರದೇಶದಲ್ಲಿ ನಿನ್ನೆ (ಜ.9) ರಾತ್ರಿ ನಡೆದಿದೆ. ಸಾಕ್ಷಿಯನ್ನು ನಾಶ ಮಾಡಲು ಮಗಳ ಶವವನ್ನು ಸುಟ್ಟು ಹಾಕಿರುವುದಾಗಿ ವರದಿಯಾಗಿದೆ.

 

ಮೃತಳನ್ನು ಸೊನಾಲಿ ಮೊಹರಾಣ ಎಂದು ಗುರುತಿಸಲಾಗಿದೆ. ಹಿರಿಯ ಸಹೋದರಿ ರಂಜಿತಾ ಮೊಹರಾಣ ನೀಡಿದ ದೂರಿನ ಆಧಾರದ ಮೇಲೆ ಗೋಪ್​ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ದುರ್ಗಾಚರಣ ಮೊಹರಾಣ ಎಂಬುವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ 2018 ರಲ್ಲಿ ಮೊದಲ ಪತ್ನಿ ಮೃತಪಟ್ಟ ಬಳಿಕ ದುರ್ಗಾಚರಣ್ 2020 ರಲ್ಲಿ ಮಮತಾ ಓಜಾ ಅವರನ್ನು ಎರಡನೇ ವಿವಾಹವಾದರು. ಮೃತ ಸೊನಾಲಿ ಮೊದಲ ಪತ್ನಿಯ ಮಗಳು. ಎರಡನೇ ಮದುವೆಯ ಬಳಿಕ ಆಕೆಯ ತಂದೆ, ಮಲತಾಯಿ ಮತ್ತು ಆಕೆಯ ಸಹೋದರ ಜೀವನ್ ಓಜಾ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಸಹೋದರಿ ರಂಜಿತಾ ಆರೋಪಿಸಿದ್ದಾರೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ