Breaking News

ಸಿದ್ದೇಶ್ವರ ಮಹಾಸ್ವಾಮಿಗಳು ಅಸ್ತಂಗತವಾದ ಹಿನ್ನೆಲೆಯಲ್ಲಿ ಅಥಣಿ ಕಾರ್ಯನಿರತ ಪತ್ರಕರ್ತ ಸಂಘದಿಂದ ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಶ್ರದ್ಧಾಂಜಲಿ

Spread the love

ನಾಡು ಕಂಡ ಶ್ರೇಷ್ಠ ಸಂತ ಸಿದ್ದೇಶ್ವರ ಮಹಾಸ್ವಾಮಿಗಳು ಅಸ್ತಂಗತವಾದ ಹಿನ್ನೆಲೆಯಲ್ಲಿ ಅಥಣಿ ಕಾರ್ಯನಿರತ ಪತ್ರಕರ್ತ ಸಂಘದಿಂದ ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಶ್ರದ್ಧಾಂಜಲಿಯನ್ನು ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಸಿ. ಎ ಇಟ್ನಾಳಮಠ ವಿಶ್ವದ ಶ್ರೇಷ್ಠ ಸಂತರಲ್ಲಿ ಒಬ್ಬರಾದ ಸಿದ್ಧೇಶ್ವರ ಮಹಾಸ್ವಾಮಿಗಳು ತಮ್ಮ ಸರಳತೆಯಿಂದ ಮತ್ತು ಜ್ಞಾನದಿಂದ ಜನರ ಮನಸ್ಸಿನಲ್ಲಿ ನೆಲೆಸಿದವರು ಅಂತ ಅವರ ಅಗಲಿಕೆಯಿಂದ ನಿಜಕ್ಕೂ ನಾಡು ಅನಾಥವಾಗಿದೆ ಸಾಕಷ್ಟು ಸಾಧು ಸಂತರು ದೇಣಿಗೆ ಸಂಗ್ರಹ ಮಾಡುವುದು ಮಠಗಳನ್ನು ಕಟ್ಟುವುದು ಐಷಾರಾಮಿ ಜೀವನ ನಡೆಸುವುದನ್ನು ಮಾಡಿದರೆ ಸಿದ್ದೇಶ್ವರ ಸ್ವಾಮಿಗಳು ಅಂತಹ ಯಾವುದೇ ಜೀವನಕ್ಕೆ ತುಡಿಯದೇ ತಮ್ಮದೇ ಆದ ಸಿದ್ಧಾಂತದ ಮೂಲಕ ಮತ್ತು ಅದನ್ನು ಪಾಲಿಸುವ ಮೂಲಕ ಕೊನೆಗೆ ತಮ್ಮ ಅಂತ್ಯಕ್ರಿಯೆ ನಡೆಸುವಾಗಲು ಯಾವುದೇ ಸ್ಮಾರಕ ನಿರ್ಮಿಸಬೇಡಿ, ದೆಹಕ್ಕೆ ಅಗ್ನಿ ಸ್ಪರ್ಶ ಮಾಡಿ ಚಿತೆಯನ್ನು ನದಿಗೆ ತೇಲಿಬಿಡಬೇಕು ಎಂದು ಬರೆಯುವ ಮೂಲಕ ಅಂತ್ಯಕ್ರಿಯೆಯಲ್ಲೂ ಸರಳತೆಯನ್ನು ಅನುಸರಿಸಬೇಕೆಂದು ತಿಳಿಸುವ ಮೂಲಕ ಆದರ್ಶ ಜೀವನವನ್ನು ನಡೆಸಿದ್ದಾರೆ ಎಂದರು.

ಈ ವೇಳೆ ಮಾತನಾಡಿದ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಸಿದ್ದೇಶ್ವರ ಸ್ವಾಮೀಜಿ ನಡೆಸಿದ ಜೀವನ ಮೌಲಿಕವಾದುದು.ಅವರು ಜೇಬಿಲ್ಲದ ಸ್ವಾಮೀಜಿ ಎಂದು ಹೆಸರಾಗಿದ್ದಷ್ಟೇ ಅಲ್ಲ ತಮ್ಮನ್ನು ಅರಸಿ ಬಂದ ಪದ್ಮಶ್ರೀ ಮತ್ತು ಗೌರವ ಡಾಕ್ಟರೇಟ್ ಕೂಡ ಅಷ್ಟೇ ಗೌರವದಿಂದ ನಿರಾಕರಿಸಿದ ಮಹಾನ್ ಸಂತರು ಅವರು ಬದುಕಿದಷ್ಟೇ ಸರಳವಾಗಿ ಅಂತ್ಯಕ್ರಿಯೆ ನೆರವೇರಿಸುವಂತೆ ವಿಲ್ ಬರೆದಿರುವದನ್ನು ನೋಡಿದರೆ ನುಡಿದಂತೆ ನಡೆದ ಪುಣ್ಯಾತ್ಮರ ಬದುಕು ಉಳಿದವರಿಗೆ ಆದರ್ಶನಿಯ ಎಂದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ