ಬೆಂಗಳೂರು: ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎನ್‌ಪಿಎಸ್ ನೌಕರರು ನಡೆಸುತ್ತಿದ್ದ ಧರಣಿಯನ್ನು ಸೋಮವಾರ ಅಂತ್ಯಗೊಳಿಸಿದ್ದಾರೆ.
‘ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ’ದ ಆಶ್ರಯದಲ್ಲಿ ಡಿ.19ರಿಂದ ಧರಣಿ ನಡೆಸುತ್ತಿದ್ದರು.
‘ಎನ್‌ಪಿಎಸ್ ನೌಕರರ ಸಭೆ ಕರೆಯುವುದಾಗಿ ಸಿ.ಎಂ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ‘ವೋಟ್ ಫಾರ್ ಒಪಿಎಸ್’ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ಅವರು ತಿಳಿಸಿದ್ದಾರೆ.
‘ಹಳೆ ಪಿಂಚಣಿ ಯೋಜನೆ ನಮ್ಮ ಹಕ್ಕು’ ಎನ್ನುವ ಘೋಷ ವಾಕ್ಯದೊಂದಿಗೆ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ
Laxmi News 24×7