ಅಪರಿಚಿತ ಶಿಶುವಿನ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಸ್ಮಶಾನದ ಬಾವಿಯಲ್ಲಿ ಮಗು ಎಸೆದು ಹೋಗಿರುವ ಘಟನೆ ವಿಜಯಪುರ ನಗರದ ದೇವಗಿರಿ ಸ್ಮಶಾನದ ಬಾವಿಯಲ್ಲಿ ನಡೆದಿದೆ.
ಸ್ಮಶಾನದ ಬಾವಿ ಮೋಟರ್ ಸ್ಟಾರ್ಟ್ ಮಾಡಲು ಹೋದಾಗ ಅಂದಾಜು 8 ರಿಂದ 9 ತಿಂಗಳ ಶಿಶುವಿನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಆದರ್ಶ ನಗರ ಪಿ.ಎಸ್.ಐ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡು ಮಗುವಿನ ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ