Breaking News

ರಾಯಣ್ಣನ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿದ ಸಿದ್ದರಾಮಯ್ಯನವರು

Spread the love

ಅಥಣಿಯ ಹಿರಿಯ ಮುಖಂಡ ಎಸ್ ಕೆ ಬುಟಾಳಿ ಅವರು ಕೊಡುಗೆಯಾಗಿ ನೀಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸಿದರು.

ಪಟ್ಟಣದ ವಿಜಯಪೂರ ರಸ್ತೆಗೆ ಹೊಂದಿಕೊಂಡ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯನವರು ರಾಯಣ್ಣನ ದೇಶಪ್ರೇಮ,

ರಾಜನಿಷ್ಠೆಯನ್ನು ನಮ್ಮ ಯುವಜನತೆ ಮೈಗೂಡಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕೊಡುಗೆಯನ್ನಾಗಿ ನೀಡಿದ ಬುಟಾಳಿ ಅವರ ಕೊಡುಗೆ ಈ‌ ನಾಡಿಗೆ ದೊಡ್ಡದು ಎಂದರು.

ಅವರು ಮುಂದೆ ಮಾತನಾಡುತ್ತಾ, ಮಹಾಜನ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಮಹಾರಾಷ್ಟ್ರಕ್ಕೆ ಒಂದಿಂಚೂ ಜಾಗ ಬಿಟ್ಟು ಕೊಡುವದಿಲ್ಲ. ಮಹಾಜನ ವರದಿಯೇ ಅಂತೀಮ ಸರ್ಕಾರ ಒಳ್ಳೆಯ ವಕೀಲರನ್ನ ನೇಮಿಸಿ ಮಹಾರಾಷ್ಟ್ರದ ಅರ್ಜಿ ಸುಪ್ರೀಂಕೋರ್ಟ್ನಲ್ಲಿ ವಜಾಗೊಳ್ಳುವಂತೆ ಸೂಚಿಸಿದರು. ಅದೇ ರೀತಿ ಈ ಭಾಗದಲ್ಲಿ ರೈತರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ .

ಆದರೆ ಸರ್ಕಾರ ರೈತರಿಗೆ ಯಾವದೇ ಬೆಳೆ ಪರಿಹಾರ ನೀಡದೇ ಮೋಸ ಮಾಡುತ್ತಿದೆ ಅದಷ್ಡೇ ಅಲ್ಲದೇ ಕಬ್ಬು ಮತ್ತು ದ್ರಾಕ್ಷಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದ್ಯಾವುದರ ಕಡೆಗೆ ಸರ್ಕಾರ ನ ನೀಡುತ್ತಿಲ್ಲ. ರೈತರ ಬೆಳೆಗಳಿಗೆ ಹಾಯಿಸಲು ಕೇವಲ ಮೂರು ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದೆ. ಅಲ್ಲದೇ ೨೦೧೯ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಸಂಪೂರ್ಣ ಮನೆಗಳು ಬಿದ್ದರೂ ಸಹ ಸಿ ಶ್ರೆಣಿಯಲ್ಲಿ ಹಾಕಿ ಕುಟುಂಬಗಳಿಗೆ ಅನ್ಯಾಯ ಮಾಡಲಾಗಿದೆ ಇದನ್ನ ನಾನು ನಾಳೆ ಅಧಿವೇಶನ ಸಂದರ್ಭದಲ್ಲಿ ಚರ್ಚೆಗೆ ತರೆಯುವದಾಗಿ ಹೇಳಿದರು.


Spread the love

About Laxminews 24x7

Check Also

ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ ಸಂಬಂಧವಿಲ್ಲ

Spread the loveಚಿಕ್ಕೋಡಿ: “ಕೂಡಲಸಂಗಮ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರದ್ದು ಉಚ್ಚಾಟನೆಯೇ ಅಲ್ಲ, ಆ ಟ್ರಸ್ಟಿಗೂ ಕೂಡಲಸಂಗಮ ಪೀಠಕ್ಕೂ ಯಾವುದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ