ಬೆಂಗಳೂರು : 143 ಅಂಗಾಂಗ ದಾನ ಮಾಡಿದ ಕರ್ನಾಟಕಕ್ಕೆ 2ನೇ ಸ್ಧಾನ ಪಡೆದಿದ್ದು, ನಿಜಕ್ಕೂ ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ
ತೆಲಂಗಾಣ ನಂತರ ದಕ್ಷಿಣದ ರಾಜ್ಯಗಳಲ್ಲಿ ಅಂಗಾಂಗ ದಾನದಲ್ಲಿ2022 ಡಿಸೆಂಬರ್ 14 ವರೆಗಿನ ದಾಖಲೆ ಸಂಖ್ಯೆಯ ಆಧಾರದ ಮೇಲೆ 143 ಅಂಗಾಂಗಗಳೊಂದಿಗೆ ಎರಡನೇ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ. ಇದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕದಾದ್ಯಂತ ಸುಮಾರು 397 ಜನರಿಗೆ ಅಂಗಾಂಗವನ್ನು ನೀಡುವ ಮೂಲಕ ಹೊಸ ಜೀವನ ನಡೆಸುವವರಿಗೆ ಅಧಾರ ನೀಡಿದ್ದು , ನಮ್ಮ ಕರ್ನಾಟಕಕ್ಕೆ ಹೆಗ್ಗಳಿಕೆ ತಂದಿದೆ. 2019ರ ವರ್ಷ ಕರ್ನಾಟಕದಲ್ಲಿ 70 ಅಂಗಾಂಗ ದಾನ ಮಾಡಿತ್ತು. ನಂತರ ಹಲವು ರೀತಿ ಅಂಗಾಂಗ ದಾನ ಮಾಡುವ ಬಗ್ಗೆ ವಿಶೇಷ ಜಾಗೃತಿ ಮೂಡಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ 2021ಕ್ಕೆ ಹೋಲಿಸಿದ್ದರೆ, 2022 ರಲ್ಲಿ ನಾಲ್ಕರಿಂದ ಅಂಗಾಂಗ ದಾನಗಳ ಸಂಖ್ಯೆ 15 ಕ್ಕೆ ಏರಿಕೆ ಕಂಡಿದೆ. ಇದರಲ್ಲಿ 95 ಪ್ರತಿಶತದಷ್ಟು ಮೆದುಳು ನಿಷ್ಕ್ರಿಯಗೊಂಡ ರೋಗಿಗಳ ಕುಟುಂಬದ ಸದಸ್ಯರು ಅಂಗಾಂಗ ದಾನದಂತಹ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ 72 ಜನರ ಜೀವಗಳನ್ನು ಉಳಿಸಲಾಯಿತು.