ಜನರ ಓಡಾಟಕ್ಕಾಗಿ ಅನುಕೂಲವಾಗಲು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಇ ಸೈಕಲ್ ಹಾಗೂ ಇ ಬೈಕ್ ಗಳನ್ನು ಶಾಸಕ ಅಭಯ ಪಾಟೀಲ ಅವರು ಚಾಲನೆ ನೀಡಿದರು.
ಬೆಳಗಾವಿಯ ಶಾಹಸಪುರದ ಶಿವ ಚರಿತ್ರೆ ಹತ್ತಿರ ಇ ಸೈಕಲ್ ಹಾಗೂ ಇ ಬೈಕ್ ಗಳಿಗೆ ಚಾಲನೆ ನೀಡದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅಭಯ ಪಾಟೀಲ ಅವರು, 100 ಇ ಸೈಕಲ್, 100 ಇ ಬೈಕ್ ಹಾಗೂ 100 ಸೈಕಲ್ ಹೀಗೆ 300 ಎಲೆಕ್ಟ್ರಿಕಲ್ ಸೈಕಲ್ ಬೈಕ್ ಹಾಗೂ ಸೈಕಲ್ ಗಳುನ್ನು ನಗರದಲ್ಲಿ 20 ಸ್ಟೇಷನ್ ಮಾಡಿ, ಜನರ ಬಳಕೆಗೆ ಜಾರಿಗೆ ತರಲಾಗಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಇವುಗಳಿಗೆ ಬೇಡಿಕೆ ಜಾಸ್ತಿ ಆದರೆ ಇನ್ನು ಹೆಚ್ಚಿನ ಸ್ಟೇಷನ್ ಮಾಡಿ ಹೆಚ್ಚುವರಿ ಸೈಕಲ್ ಹಾಗೂ ಬೈಕ್ ಗಳನ್ನು ಜನರ ಅನುಕೂಲಕ್ಕಾಗಿ ಜಾರಿಗೆ ತರಲಿದ್ದೇವೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಸ್ಮಾರ್ಟ್ ಸಿಟಿ ಎಂಡಿ ಪ್ರವೀಣ್ ಬಾಗೇವಾಡಿ ಅವರು, ಸಾರ್ವಜನಿಕರು ಇ ಬೈಕ್ ಹಾಗೂ ಇ ಸೈಕಲ್ ಬಳಕೆ ಮಾಡಬೇಕು ಇದರಿಂದ ಪರಿಸರ ರಕ್ಷಣೆ ಜೊತೆಗೆ ಸಂಚಾರ ದಟ್ಟಣೆ ತಪ್ಪಿಸಬೇಕು. ಇ ಸೈಕಲ್ ಹಾಗೂ ಇ ಬೈಕ್ ಗಳುನ್ನು ಬಳಕೆ ಮಾಡಲು “ಯಾನಾ” ಎಂಬ ಆಫ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಬೇಕು. ಅರ್ಧ ಗಂಟೆಗೆ ಇ ಸೈಕಲ್ ಗಳಿಗೆ 15 ರೂಪಾಯಿ ಸೈಕಲ್ ಗಳಿಗೆ 5 ರೂಪಾಯಿ ಹಾಗೂ ಇ ಬೈಕ್ ಗೆ 30 ರೂಪಾಯಿ ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.