Breaking News

ಪ್ರತಿಷ್ಠಿತ ಬ್ಯಾಂಕ್​​ನಲ್ಲಿಟ್ಟಿದ್ದ ಚಿನ್ನ ಮಾಯ

Spread the love

ಳ್ಳಕಾಕರ ಭಯದಿಂದ ಜನಸಾಮಾನ್ಯರು ತಮ್ಮ ಹಣ ಹಾಗೂ ಚಿನ್ನ ಸುರಕ್ಷಿತವಾಗಿರುತ್ತೆ ಅಂತ ಬ್ಯಾಂಕ್​ನಲ್ಲಿಡುತ್ತಾರೆ. ಆದ್ರೆ ಆ ಬ್ಯಾಂಕ್​ನಲ್ಲಿಟ್ಟ ಹಣವೇ ಮಂಗಮಾಯವಾದ್ರೆ.. ಇಂಥ ಶಾಕಿಂಗ್ ಸುದ್ದಿಯಿಂದ ಕುಟುಂಬವೊಂದು ಕಂಗಾಲಾಗಿದೆ.

ಬ್ಯಾಂಕ್ ಅಂದ್ರೆ ಜನಸಾಮಾನ್ಯರ ದುಡ್ಡಿನ ಹಾಗೂ ಚಿನ್ನದ ಸೆಕ್ಯೂರಿಟಿ ಗಾರ್ಡ್.

ಕಷ್ಟ ಪಟ್ಟು ದುಡಿದು ಸಂಪಾದಿಸಿದ ಹಣ ಅಥವಾ ಕೊಂಡುಕೊಂಡ ಚಿನ್ನವನ್ನ ಮನೆಯಲ್ಲಿಟ್ರೆ ಯಾವಾಗ ಅದ್ಯಾವ ಖದೀಮರು ಮನೆಗೆ ನುಗ್ಗಿ ಎಸ್ಕೇಪ್ ಮಾಡಿಬಿಡ್ತಾರೋ ಅನ್ನೋ ಭಯಕ್ಕೆ ಜನ ಬ್ಯಾಂಕ್​ಗಳಲ್ಲಿ ಠೇವಣಿ ಇಡ್ತಾರೆ. ಆ ಬ್ಯಾಂಕ್​ನಲ್ಲಿಟ್ಟ ಬೆಲೆಬಾಳುವ ಚಿನ್ನವೇ ಕಾಣೆಯಾದ್ರೆ? ಹೀಗೊಂದು ಪ್ರಶ್ನೆಯೇ ಜನರ ನಿದ್ದೆಗೆಡಿಸುತ್ತೆ. ಆದ್ರೆ ಇಲ್ಲಿ ಹೀಗಾಗಿದೆ.

ಸೇಫ್ ಆಗಿರಲಿ ಅಂತ ಇಟ್ಟ ಚಿನ್ನನೇ ಲಾಕರ್​ನಿಂದ ಮಂಗ ಮಾಯ
ಇಲ್ಲಿ ಹೀಗೆ ಲಾಕರ್​ ಕೀ ತೋರಿಸ್ತಾ ಆಕಾಶನೇ ತಲೆ ಮೇಲೆ ಬಿದ್ದಂತಿದಾರಲ್ಲ ಇವ್ರ ಹೆಸರು ಕೃಷ್ಣಕುಮಾರ್, ಬೆಂಗಳೂರಿನ ಯಲಹಂಕದವರು. ಇವರೇ ನೋಡಿ ತಮ್ಮ ಚಿನ್ನವನ್ನು ಕಳಕೊಂಡವರು. ಇವರು ವಿದೇಶಕ್ಕೆ ಹೋಗುವಾಗ ಸೇಫ್ ಆಗಿರಲಿ ಅಂತ ಬ್ಯಾಂಕ್​ನ ಲಾಕರ್​ನಲ್ಲಿಟ್ಟ ಚಿನ್ನವೇ ಮಂಗಮಾಯವಾಗಿದೆ. ಯಲಹಂಕದ ಕರ್ನಾಟಕ ಬ್ಯಾಂಕ್​ನ ಲಾಕರ್​ಗೆ ಖದೀಮರು ಕನ್ನ ಹಾಕಿ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನೇ ಎಸ್ಕೇಪ್ ಮಾಡಿದ್ದಾರೆ.

ಲಾಕರ್​ನಲ್ಲಿಟ್ಟ ಚಿನ್ನ ಮಾಯ..

  • ವಿದೇಶಕ್ಕೆ ತೆರಳುವಾಗ ಚಿನ್ನ ಲಾಕ್​ರನಲ್ಲಿಟ್ಟಿದ್ದ ಕೃಷ್ಣಕುಮಾರ್
  • ಜರ್ಮನಿಯಿಂದ ವಾಪಸ್​, ಕರ್ನಾಟಕ ಬ್ಯಾಂಕ್​ಗೆ ಹೋದಾಗ ಶಾಕ್
  • ಚಿನ್ನಾಭರಣ ಇಟ್ಟಿದ್ದ ಲಾಕರ್ ಖಾಲಿ ಖಾಲಿಯಾಗಿ ಬಿದ್ದಿತ್ತು
  • 3 ದಿನಗಳಲ್ಲಿ ವಾಪಸ್ ಕೊಡ್ತೀವಿ ಅಂತ ಹೇಳಿದ್ದ ವ್ಯವಸ್ಥಾಪಕ
  • ಮೂರು ದಿನ ಬಿಟ್ಟು ಮ್ಯಾನೇಜರ್ ಪ್ರದೀಪ್​ ಬಳಿ ಹೋಗಿದ್ದ ಕೃಷ್ಣ
  • ಪೊಲೀಸ್ ಠಾಣೆಗೆ ದೂರು ಕೊಡೋದಾದ್ರೆ ಕೊಡಿ ಅಂತ ಉಡಾಫೆ
  • ಯಲಹಂಕ ನ್ಯೂ ಟೌನ್ ಠಾಣೆಗೆ ದೂರು ನೀಡಿದ ಕೃಷ್ಣಕುಮಾರ್
  • ಪ್ರದೀಪ್, ಕಸ್ಟೋಡಿಯನ್ ಸೌಮ್ಯಾ, ನಳನ ವಿರುದ್ಧ ದೂರು
  • ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸ್ತಿರುವ ಪೊಲೀಸರು

ಒಟ್ಟಾರೆ ತಾವು ದುಡಿದು ಸಂಪಾದಿಸಿದ ದುಡ್ಡನ್ನ ಸುರಕ್ಷಿತವಾಗಿರುತ್ತೆ ಅಂತ ಬ್ಯಾಂಕ್​ನಲ್ಲಿಟ್ರೆ ಅಲ್ಲಿಂದಲೇ ಹಣ ಮಾಯವಾಗಿದೆ. ಈ ಬಗ್ಗೆ ಕೇಳಿದ್ರೆ ಬ್ಯಾಂಕ್ ಸಿಬ್ಬಂದಿ ಉಡಾಫೆ ಉತ್ತರ ಕೊಡ್ತಿದ್ದಾರೆ. ಸದ್ಯ ಪೊಲೀಸರೇ ಚಿನ್ನ ಕಳೆದುಕೊಂಡು ಕಂಗಾಲಾಗಿರುವವರಿಗೆ ನ್ಯಾಯ ಕೊಡಿಸಬೇಕಿದೆ.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ