ಪಣಜಿ: ಗೋವಾದಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆ. ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು ಚರ್ಚ್ ಗಳಿಗೆ ಬಣ್ಣ ಬಡಿದು ಸಿಂಗರಿಸಲಾಗುತ್ತಿದ್ದು, ಕ್ರೈಸ್ತ ಬಾಂಧವರ ಮನೆಗಳಲ್ಲಿಯೂ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.
ಕ್ರಿಸ್‍ಮಸ್ ಹಬ್ಬದೊಂದಿಗೆ ಹೊಸ ವರ್ಷ ಸಂಭ್ರಮಾಚರಣೆ ಕೂಡ ಆರಂಭಗೊಳ್ಳಲಿರುವುದರಿಂದ ಲಕ್ಷಾಂತರ ಸಮಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯನ್ನು ಗೋವಾದ ಪ್ರವಾಸೋದ್ಯಮ ಇಲಾಖೆ ಹೊಂದಿದೆ.
ಮಾರುಕಟ್ಟೆಗಳಲ್ಲಿ ಕ್ರಿಸ್‍ಮಸ್ ಟ್ರಿ, ಸ್ಟಾರ್ ಗಳು, ಜಿಂಗಲ್‍ಬೆಲ್, ಸಾಂತಾಕ್ಲಾಸ್‍ಗಳು ಪ್ರಮುಖ ಆಕರ್ಷಣೆಯಾಗಿದೆ. ಮನೆ ಮನೆಯ ಮುಂದೆ ಹಾಗೂ ಚರ್ಚ್ ಗಳ ಮುಂದೆ ಏಸುವಿನ ಜನನದ ಸಾಂಕೇತಿಕ ಆಕರ್ಷಕ ಗೋದಲಿ ನಿರ್ಮಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಏಸುವಿನ ಜಜನದ ಪುಟ್ಟ ಪುಟ್ಟ ಗೋದಲಿಗಳನ್ನು ಮಾರಾಟ ಮಾಡಲಾಗುತ್ತದೆ.
ಕ್ರಿಸ್‍ಮಸ್ ಹಬ್ಬದೊಂದಿಗೆ ಗೋವಾದಲ್ಲಿ ಹೊಸ ವರ್ಷದ ಸಂಭ್ರಮಚರಣೆ ಕೂಡ ಆರಂಭಗೊಳ್ಳಲಿರುವುದರಿಂದ ಸದ್ಯ ದೇಶ-ವಿದೇಶಿಯ ಪ್ರವಾಸಿಗರು ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಡಿಸೆಂಬರ್ 20 ರ ನಂತರ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುವ ನಿರೀಕ್ಷೆಯನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.