ಮೂಡಲಗಿ: ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಾನದ 29ನೇ ವರ್ಷದ ಮಹಾಪೂಜೆ ಉತ್ಸವ ಅಂಗವಾಗಿ ಸೋಮವಾರ ಸ್ಥಳೀಯ ಯಲ್ಲಮ್ಮದೇವಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆಯಿತು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ರವಿ ಗುರುಸ್ವಾಮಿ, ಬೈಂದೂರ ರಾಜುಶೆಟ್ಟಿ, ಹುಬ್ಬಳ್ಳಿಯ ಮೋಹನ, ಬೆಳಗಾವಿಯ ಮಾರುತಿ ಗುರುಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು.
ಅಯ್ಯಪ್ಪಸ್ವಾಮಿಯ ಮೂರ್ತಿಯನ್ನು ಹೊತ್ತ ಜಂಬೂ ಸವಾರಿಯೊಂದಿಗೆ ವಿವಿಧ ಕಲಾ ತಂಡಗಳು, ಸಾರವಾಡ ಗೊಂಬೆ ಕುಣಿತ, ಒಂಟೆ, ಕುದರೆಗಳು, ವಿವಿಧ ವಾದ್ಯಗಳು ಗಮನ ಸೆಳೆದವು.
ಕುಂಭ ಹೊತ್ತ ಸ್ವಾಮಿಗಳ ಸಾಲು, ದೀಪ, ಆರತಿಗಳು ಮೆರವಣಿಗೆಗೆ ಕಳೆಕಟ್ಟಿತು. ಮೂಡಲಗಿ ಸೇರಿದಂತೆ ವಿವಿಧ ಗ್ರಾಮಗಳ ಮಾಲಾಧಾರಿಗಳು, ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಕರುನಾಡು ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ಮೆರವಣಿಗೆಯಯಲ್ಲಿ ಭಾಗವಹಿಸಿದ್ದರು. ಅರ್ನಸಂತರ್ಪಣೆಯಲ್ಲಿ ಜಾತಿ, ಧರ್ಮ, ಮೇಲು, ಕೀಳು ಎನ್ನದೆ ಎಲ್ಲರೂ ಭಾಗವಹಿಸಿ ಸೌಹಾರ್ದ ಬಿಂಬಿಸಿದರು.