ಸಾಂಬ್ರಾ: ಸಮೀಪದ ಬಸವಣಕುಡಚಿಯ ದೇವರಾಜ ಅರಸು ಕಾಲೊನಿಯಲ್ಲಿ ಈಚೆಗೆ ಶಾಸಕ ಅನಿಲ ಬೆನಕೆ ಅವರು ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.
ಕಾಲೊನಿಯ ಅನುಭವ ಮಂಟಪ ದುರಸ್ತಿ, ನಿರ್ವಹಣೆ ಮಾಡಲು ನಗರ ಸೇವಕರು ಹಾಗೂ ಸ್ಥಳೀಯ ಮುಖಂಡರ ಸಮಿತಿ ಮಾಡುವುದು, ಅಷ್ಠವಿನಾಯಕ ಮಂದಿರದ ಪಕ್ಕದಲ್ಲಿ ಇರುವ ಮಹಾನಗರ ಪಾಲಿಕೆಯ ಉದ್ಯಾನವನದಲ್ಲಿ ನೀರು ಶುದ್ಧೀಕರಣ ಘಟಕ ಅಳವಡಿಸುವುದು, ಒಂದು ಬೋರ್‌ವೆಲ್ ಕೊರೆಯಿಸಿ ಪೈಪ್‌ಲೈನ್ ಅಳವಡಿಸಿ ನೀರು ಪೂರೈಸಲಾಗುವುದು ಎಂದು ಶಾಸಕ ತಿಳಿಸಿದರು.
ಶಿವಾಲಯ ಮಂದಿರ ಪಕ್ಕದಲ್ಲಿನ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಬೆಂಚ್‍ಗಳನ್ನು ಹಾಗೂ ಹೊರಂಗಣ ಕ್ರೀಡಾಸಾಮಗ್ರಿ ಹಾಗೂ ಜಿಮ್ ಸಾಮಗ್ರಿಗಳನ್ನು ಅಳವಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಈಗಾಗಲೇ ಇಲ್ಲಿನ ಸಾರ್ವಜನಿಕರ ಸಹಕಾರದಿಂದ ದೇವರಾಜ ಅರಸು ಕಾಲೊನಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಮುಂದೆಯೂ ತಮ್ಮ ಸೇವೆ ಮಾಡುತ್ತೇನೆ ಎಂದರು.
ನಗರ ಸೇವಕ ಬಸವರಾಜ ಮೊದಗೇಕರ, ದೇವರಾಜ ಅರಸ ಕಾಲೊನಿ ವೆಲ್‌ಫೇರ್ ಅಸೋಸಿಯೇಷನ್ ಪದಾಧಿಕಾರಿಗಳು, ಅಷ್ಠ ವಿನಾಯಕ ಮಂದಿರ ಕಮೀಟಿ ಸದಸ್ಯರು, ನಂದಾ ಸುಣಗಾರ, ನೂತನ ಮಜಗಾವಿ, ಯುವಕ ಸಂಘದ ಸದಸ್ಯರು ಮತ್ತು ರಹವಾಸಿಗಳು ಇದ್ದರು.