Home / ರಾಜಕೀಯ / ಬಗರ್ ಹುಕುಂ ಭೂಮಿ ಸಕ್ರಮ, ಮಹತ್ವದ ಆದೇಶ

ಬಗರ್ ಹುಕುಂ ಭೂಮಿ ಸಕ್ರಮ, ಮಹತ್ವದ ಆದೇಶ

Spread the love

ಬೆಂಗಳೂರು, ಡಿಸೆಂಬರ್ 13; ನಗರಗಳು ಮತ್ತು ನಗರ ಪುರಸಭೆ ಪರಿಮಿತಿಯೊಳಗೆ ಬಗರ್‌ ಹುಕುಂಭೂಮಿಮಂಜೂರು ಮಾಡುವ ಕುರಿತು ಕರ್ನಾಟಕದ ಕಂದಾಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

 

ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್. ಜಯರಾಮ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ನಿರ್ದಿಷ್ಟಪಡಿಸಿರುವ ಪರಿಮಿತಿಗಳಿಂದ ಅಂತರದೊಳಗೆ ಬರುವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ಎಂದು ಸೂಚನೆ ನೀಡಲಾಗಿದೆ.

 

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ)ರನ್ವಯ ವಿಧಾನಸಭಾ ಕ್ಷೇತ್ರವಾರು ಬಗ‌ರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗಳನ್ನು ರಚಿಸಿ, ಅವುಗಳ ಮುಖಾಂತರ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 94ಎ, 94ಬಿ ಹಾಗೂ 94ಎ(4)ರಡಿ ಮಂಜೂರು ಮಾಡಲು ಅವಕಾಶವಿರುತ್ತದೆ.

 

ಅದರಂತೆ, ರಚಿತವಾದ ಸಮಿತಿಗಳು ಕಲಂ 94ಎ(4)ರನ್ವಯ ನಗರಗಳು ಮತ್ತು ನಗರ ಪುರಸಭೆಗಳ ಪರಿಮಿತಿಯೊಳಗೆ ಬರುವ ಪ್ರದೇಶಗಳಲ್ಲಿ ನಿರ್ದಿಷ್ಟಪಡಿಸಿರುವ ಪರಿಮಿತಿಗಳಿಂದ ಅಂತರದೊಳಗೆ ಬರುವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

* ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಂತರ 18 ಕಿ. ಮೀ.

* ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಉಪಬಂಧಗಳ ಅಡಿಯಲ್ಲಿ ಅನುಕ್ರಮವಾಗಿ ಬರುವ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ- ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳು ಮತ್ತು ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಉಪಬಂಧಗಳ ಅಡಿಯಲ್ಲಿ ಬರುವ ಇತರ ನಗರ ಪಾಲಿಕೆಗಳು 10 ಕಿ. ಮೀ.

* ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಉಪಬಂಧಗಳ ಅಡಿಯಲ್ಲಿ ಬರುವ ಎಲ್ಲಾ ನಗರ ಪೌರಸಭೆಗಳು (CMC) 5 ಕಿ. ಮೀ.

* ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಉಪಬಂಧಗಳ ಅಡಿಯಲ್ಲಿನ ಎಲ್ಲಾ ಪೌರಸಭೆಗಳು (TMC) ಮತ್ತು ಪಟ್ಟಣ ಪಂಚಾಯತ್‌ಗಳು 3 ಕಿ. ಮೀ.

ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶವನ್ನು ಕಳಿಸಲಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಅದರ ಸರಹದ್ದಿನಿಂದ ನಿರ್ಬಂಧಿಸಿರುವ ಅಂತರದ ಒಳಗೆ ಇರುವ ಜಮೀನುಗಳನ್ನು ಸಕ್ರಮಗೊಳಿಸುವುದು ಕಾನೂನು ಬಾಹಿರವೆಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿರುತ್ತದೆ.

ಬಿಬಿಎಂಪಿ/ ನಗರ/ ನಗರ ಪೌರಸಭೆ/ ಪಟ್ಟಣ ಪಂಚಾಯತಿಗಳ ಪರಿಮಿತಿಯಲ್ಲಿ ಬರುವ ಜಮೀನುಗಳನ್ನು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯು ಅಕ್ರಮವಾಗಿ ಮಂಜೂರು ಮಾಡಿದಲ್ಲಿ ಅಂತಹ ಜಮೀನುಗಳನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 108(ಕೆ) ರನ್ವಯ ರದ್ದುಗೊಳಿಸಿ ಒಂದು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ಕೊಡಲಾಗಿದೆ


Spread the love

About Laxminews 24x7

Check Also

ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು

Spread the love ಮಹಾಲಿಂಗಪುರ: ರೈತ ಸಮುದಾಯವು ಜಾಣತನದಿಂದ ಒಕ್ಕಲುತನ ಮಾಡಿದರೆ ಕಡಿಮೆ ಜಮೀನು, ಅಲ್ಪಾವಧಿಯಲ್ಲಿಯೇ ಲಾಭವನ್ನು ಮಾಡಿಕೊಳ್ಳಬಹುದು ಎಂಬುದನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ