Breaking News

ಗೋಕಾಕ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆಯಲ್ಲಿ ಕಳ್ಳತನ

Spread the love

ಬೆಳಗಾವಿ: ತಹಶೀಲ್ದಾರರೊಬ್ಬರು ಚುನಾವಣಾ ಕರ್ತವ್ಯಕ್ಕೆ ತೆರಳಿದ್ದನ್ನು ತಿಳಿದು ಮನೆಗೆ ಹೊಕ್ಕಿದ್ದ ಕಳ್ಳರು 25 ತೊಲ ಚಿನ್ನ ಮಾತ್ರವಲ್ಲದೆ ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ ಕಳ್ಳತನ ನಡೆದಿದೆ.

ಗೋಕಾಕ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಚುನಾವಣೆ ಕರ್ತವ್ಯ ನಿಮಿತ್ತ ಅವರು ಮನೆಗೆ ಬೀಗ ಹಾಕಿ ತೆರಳಿದ್ದನ್ನು ತಿಳಿದ ಕಳ್ಳರು ಮನೆಗೆ ಹೊಕ್ಕಿದ್ದರು. ತಡರಾತ್ರಿಯಲ್ಲಿ ಕಳ್ಳರು ಬೀಗ ಒಡೆದು ಒಳಹೊಕ್ಕಿದ್ದರು. ಗೋಕಾಕದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಈ ಕಳ್ಳತನ ನಡೆದಿದೆ.

ತಹಶೀಲ್ದಾರರ ಮನೆಯಲ್ಲಿದ್ದ 25 ತೊಲ ಬಂಗಾರ, 20 ತೊಲ ಬೆಳ್ಳಿ ಹಾಗೂ 4 ಸಾವಿರ ರೂ. ನಗದನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಗೋಕಾಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದೇ ವಾರದಲ್ಲಿ ಗೋಕಾಕ್​ನಲ್ಲಿ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.


Spread the love

About Laxminews 24x7

Check Also

ಶಾರ್ಟ್ ಸರ್ಕೀಟ್’ನಿಂದ ಸುಟ್ಟು ಕರಕಲಾದ ಹೊಟೇಲ್…!!!

Spread the love ಶಾರ್ಟ್ ಸರ್ಕೀಟ್’ನಿಂದ ಸುಟ್ಟು ಕರಕಲಾದ ಹೊಟೇಲ್…!!! ಬೆಳಗಾವಿಯ ಗೋವಾವೇಸ್’ನಲ್ಲಿ ಶಾರ್ಟ್ ಸರ್ಕೀಟ್’ನಿಂದ “ಹೋಟೆಲ್ ಒಂದು ಅಗ್ನಿಗಾಹುತಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ