Breaking News

ಟಿವಿ ವಾಹಿನಿಗಳವರು ಕಥೆಯನ್ನು ಹೇಳಿ, ಮುಕ್ತಾಯ ಮಾಡದೇ ಬಿಡುವುದು ಸರಿಯಲ್ಲ’ -ದರ್ಶನ್‌

Spread the love

ಮೈಸೂರು: ‘ಇಲ್ಲಿನ ತಿ.ನರಸೀಪುರ ರಸ್ತೆಯಲ್ಲಿರುವ ನನ್ನ ತೋಟದಲ್ಲಿ 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರ್ಮಿಕ ಅಪರಾಧಿ ಎನ್ನುವುದು ಸಾಬೀತಾಗಿದ್ದು, ನ್ಯಾಯಾಲಯವು 43 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಪೋಕ್ಸೊ ಅಡಿಯಲ್ಲಿ ದೀರ್ಘಾವಧಿ ಶಿಕ್ಷೆ ನೀಡಿದ ದೇಶದ ಮೊದಲ ಪ್ರಕರಣ ಇದಾಗಿದ್ದು, ಕಾಮುಕರಿಗೆ ಪಾಠವಾಗಬೇಕು.

ಹೆಣ್ಮಕ್ಕಳನ್ನು ಮುಟ್ಟಬಾರದೆಂಬ ಸಂದೇಶ ಇಂತಹ ತೀರ್ಪುಗಳ ಮೂಲಕ ಹೋಗಬೇಕು’ ಎಂದು ಚಿತ್ರನಟ ದರ್ಶನ್‌ ಹೇಳಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟನೆ ನಡೆದಾಗ, ಟಿವಿ ವಾಹಿನಿಗಳು ದರ್ಶನ್‌ ತೋಟದಲ್ಲಿ ಏನೆಲ್ಲಾ ನಡೆದಿದೆ ಗೊತ್ತಾ? ದರ್ಶನ್‌ ಏನು ಮಾಡುತ್ತಿದ್ದಾರೆ ಎಂದೆಲ್ಲಾ ಪ್ರಶ್ನಿಸುತ್ತಾ ನಾಲ್ಕು ದಿನಗಳವರೆಗೆ ಕಾರ್ಯಕ್ರಮ ಮಾಡಿದ್ದವು. ಆದರೆ, ಅಪರಾಧಿಗೆ ಶಿಕ್ಷೆ ವಿಧಿಸಿದ್ದನ್ನು ತೋರಿಸಲಿಲ್ಲ. ಇದನ್ನೂ ನಾಲ್ಕು ದಿನಗಳವರೆಗೆ ಪ್ರಸಾರ ಮಾಡಬೇಕಿತ್ತಲ್ಲವೇ? ಅಪರಾಧಿಗೆ ಶಿಕ್ಷೆ ಕೊಡಿಸಲು ಹೋರಾಡಿದ್ದನ್ನು ಜನರಿಗೆ ತಿಳಿಸಬೇಕಿತ್ತಲ್ಲವೇ’ ಎಂದು ತೀರ್ಪಿನ ಪ್ರತಿಯನ್ನು ತೋರಿಸುತ್ತಾ ಪ್ರಶ್ನಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಟಿವಿ ವಾಹಿನಿಗಳವರು ಕಥೆಯನ್ನು ಹೇಳಿ, ಮುಕ್ತಾಯ ಮಾಡದೇ ಬಿಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನನ್ನ ಮೊದಲ ಆದ್ಯತೆ ಕನ್ನಡ ಸಿನಿಮಾ ಮಾಡುವುದಷ್ಟೆ’ ಎಂದು ಪ್ರತಿಕ್ರಿಯಿಸಿದ್ದಾರೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ