ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ಶಾಂತಿಸಾಗರ ” ಸ್ಮಾರಕ ಸಭಾಮಂಟಪದಲ್ಲಿ ನಿಪ್ಪಾಣಿ ತಾಲೂಕು 3ನೇ ಕನ್ನಡ ಸಾಹಿತ್ಯಸಮ್ಮೇಳನ ಡಿ.11ರಂದು ನಡೆಯಲಿದ್ದು ಸಕಲಸಿದ್ಧತೆಗಳು ನಡೆದಿವೆ. ”ಗಡಿಭಾಗದ ಬಹುತೇಕ ಹಳ್ಳಿಗಳ ದಾನಿಗಳು ಕನ್ನಡ ಸಮ್ಮೇಳನ ಯಶಸ್ವಿಗೊಳಿಸಲು ಜೋಡಿಸಿದ್ದು ಅತ್ಯಂತ ಅದ್ಧೂರಿಯಿಂದ ಸಮ್ಮೇಳನ ಜರುಗಲಿದೆ,” ಎಂದು ಕಸಾಪ ನಿಪ್ಪಾಣಿ ತಾಲೂಕಾಧ್ಯಕ್ಷ ಈರಣ್ಣಾ ಶಿರಗಾವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವೇಳೆ ಅವರು ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು. ಕಸಾಪ ಕಾರ್ಯದರ್ಶಿ ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಿಥುನ ಅಂಕಲಿ ಕಾರ್ಯಕ್ರಮದ ಮಾಹಿತಿ ನೀಡಿ, ”ಈಗಾಗಲೇ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಮೂರು ಸಭೆಗಳು ನಡೆದಿದ್ದು, ಹೊಟ್ಟೆ ದಂಪತಿ ಸಮ್ಮೇಳನದ ಶೇ.60ರಷ್ಟು ಖರ್ಚುವೆಚ್ಚು ನೋಡಿಕೊಳ್ಳಲಿದ್ದಾರೆ,” ಎಂದು ತಿಳಿಸಿದರು.ಡಿಸೆಂಬರ 11 ರಂದು ಬೆಳಗ್ಗೆ 7.30ಕ್ಕೆ ರಾಷ್ಟ್ರಧ್ವಜಾರೋಹಣ, ಪರಿಷತ್ ಹಾಗೂ ನಾಡಧ್ವಜಾರೋಹಣ ನಡೆಯಲಿದೆ. 8 ಗಂಟೆಗೆ ಶ್ರೀ ಭುವನೇಶ್ವರಿ ಪೂಜೆ ನಡೆಯಲಿದೆ. ನಂತರ ಸಮ್ಮೇಳನದ ಸರ್ವಾಧ್ಯಕ್ಷ ಅದಯಾನಂದ ಗಳತೆಗೆ ಅವರ ಸ್ವಾಗತದೊಂದಿಗೆ ಪ್ರಥಮ ಬಾರಿಗೆ 300 ಅಡಿ ಉದ್ದದ ಕನ್ನಡ ಬಾವುಟದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಎಲ್ಲಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಳಲಿದ್ದಾರೆ” ಎಂದರು.
ಬೆಳಗ್ಗೆ 10ಕ್ಕೆ ಚಿಂಚಣಿಮಠದ ಅಲ್ಲಮಪ್ರಭು ಶ್ರೀಗಳು, ಖಡಕಲಾಟದ ಶಿವಬಸವ ಶ್ರೀಗಳು,ನಾಂದಣಿಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ, ಕವಲಗುಡ್ಡದ ಸಿದ್ದಿಯೋಗಿ ಅಮರೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮುಜರಾಯಿ ಹಾಗೂ ಹೆಜ್, ವಕ್ಷ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆ ವಹಿಸುವರು.
ಸಮ್ಮೇಳನಾಧ್ಯಕ್ಷ ಅದ್ವಯಾನಂದ ಗಳತಗೆ ಸರ್ವಾಧ್ಯಕ್ಷತೆ ವಹಿಸಲಿದ್ದು ಮಿಥುನ ಅಂಕಲಿಯವರು ಬರೆದ “ನಿಪ್ಪಾಣಿ ಪರಿಸರದಲ್ಲಿ ಕನ್ನಡ ಕಟ್ಟಿದವರು’ ಗ್ರಂಥವನ್ನು ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಬಿಡುಗಡೆಗೊಳಿಸಲಿದ್ದಾರೆ. ಸಂಸದ ಅಣ್ಣಾಸಾಹೇಬ ಜೊಲ್ಲೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಮಹಾಂತೇಶ ಕವಟಗಿಮಠ, ಸೋಮಶೇಖರ ಜಮಶೆಟ್ಟಿ ದೀಪಕ ಗುಡಗನಟ್ಟಿ ಚಂದ್ರಕಾಂತ ಕೋಟಿವಾಲೆ, ಡಾ.ಎಸ್.ಆರ್. ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ,”
ಎಂದು ಅವರು ತಿಳಿಸಿದರು. ‘ಮಧ್ಯಾಹ್ನ 12ಕ್ಕೆ ಡಾ.ಎಚ್.ಐ.ತಿಮ್ಮಾರ ಅವರ ಅಧ್ಯಕ್ಷತೆಯಲ್ಲಿ ಚಿಂತನಗೋಷ್ಠಿ ನಡೆಯಲಿದೆ. 1.30ಕ್ಕೆ ಸಾಹಿತಿ ಮೈತ್ರೇಯಣಿ ಗದಿಗೆಪ್ಪಗೌಡರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. 3 ಗಂಟೆಗೆ ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಜಿಲ್ಲೆಯ ಸಾಹಿತಿಗಳು ಹಿರಿಯ ಪದಾಧಿಕಾರಿಗಳೊಂದಿಗೆ ಸಂವಾದ ನಡೆಯಲಿದೆ. ಸಂಜೆ 4ಕ್ಕೆ ಸಾಧಕರ ಸನ್ಮಾನ ಕಾರ್ಯಕ್ರಮ, 4.30ಕ್ಕೆ ದಾನಿಗಳ ಸನ್ಮಾನ: ನಡೆಯಲಿದೆ.ನಡೆಯಲಿದ, ಸಂಜೆ 5ಗಂಟೆಗೆ ನಿಡಸೋಸಿ ಶ್ರೀಗಳು, ಅಡಿಮಠದ ಶಿವಾನಂದ ಶ್ರೀಗಳು, ಚಿಕ್ಕೋಡಿಯ ಸಂಪಾದನಾ ಹಾಗೂ ಆಡಿ ಸಿದ್ದೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.