Breaking News
Home / ರಾಜಕೀಯ / ಬೆಳಗಾವಿಯಿಂದ ಎಲ್ಲಾ ವಿಮಾನ ರದ್ದುಗೊಳಿಸಿದ ಸ್ಪೈಸ್‌ಜೆಟ್

ಬೆಳಗಾವಿಯಿಂದ ಎಲ್ಲಾ ವಿಮಾನ ರದ್ದುಗೊಳಿಸಿದ ಸ್ಪೈಸ್‌ಜೆಟ್

Spread the love

ಬೆಳಗಾವಿ, ಡಿಸೆಂಬರ್ 07; ಸ್ಪೈಸ್‌ಜೆಟ್‌ಬೆಳಗಾವಿವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸಿದೆ.

ಡಿಸೆಂಬರ್ 10ರಿಂದ ಯಾವುದೇ ವಿಮಾನಗಳು ಸಂಚಾರ ನಡೆಸುವುದಿಲ್ಲ.

ಕಡಿಮೆ ಖರ್ಚಿನಲ್ಲಿ ವಿಮಾನ ಸೇವೆ ಒದಗಿಸುವ ಸ್ಪೈಸ್‌ ಜೆಟ್ ಬೆಳಗಾವಿಯಿಂದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸುತ್ತಿದೆ. ಇದರಿಂದಾಗಿ ಪ್ರಮುಖ ನಗರಗಳಿಗೆ ಬೆಳಗಾವಿಯಿಂದ ವಿಮಾನ ಸಂಪರ್ಕ ಕಡಿತಗೊಳ್ಳಲಿದೆ.

 

ಸ್ಪೈಸ್‌ಜೆಟ್‌ ಬೆಳಗಾವಿ-ನವದೆಹಲಿ ನಡುವೆ ಸಹ ನೇರ ವಿಮಾನ ಸೇವೆ ಒದಗಿಸುತ್ತಿತ್ತು. ಈ ವಿಮಾನ ಸಹ ಡಿಸೆಂಬರ್ 10ರ ಬಳಿಕ ಸ್ಥಗಿತಗೊಳ್ಳಲಿದೆ. ಆದ್ದರಿಂದ ಬೆಳಗಾವಿಯಿಂದ ದೆಹಲಿಗೆ ಹೋಗುವವರು 5 ಗಂಟೆ ಪ್ರಯಾಣ ಮಾಡಿ, ಸಂಪರ್ಕ ವಿಮಾನ ಹತ್ತಿ ದೆಹಲಿಗೆ ಹೋಗಬೇಕಿದೆ.

 

ಬೆಳಗಾವಿ-ಮುಂಬೈ, ಬೆಳಗಾವಿ-ಹೈದರಾಬಾದ್ ನಡುವಿನ ವಿಮಾನ ಸೇವೆಯನ್ನು ಕೆಲವು ದಿನಗಳ ಹಿಂದೆ ಸ್ಥಗಿತಗೊಳಿಸಿತ್ತು. ಬೆಳಗಾವಿ-ನವದೆಹಲಿ ವಿಮಾನ ಸೇವೆಯ ಬುಕ್ಕಿಂಗ್ ಅನ್ನು ಸಹ ಸ್ಪೈಸ್‌ ಜೆಟ್ ರದ್ದುಗೊಳಿಸಿದೆ.

 

ಕಳೆದ ಮೂರು ವರ್ಷಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ ಹಲವು ವಿಮಾನಗಳ ಸೇವೆಗಳು ರದ್ದುಗೊಂಡಿವೆ.

ರದ್ದುಗೊಂಡಿರುವ ವಿಮಾನಗಳು

* ಸ್ಪೈಸ್‌ಜೆಟ್ ; ಬೆಳಗಾವಿ-ಮುಂಬೈ

* ಸ್ಪೈಸ್‌ಜೆಟ್‌ ಬೆಳಗಾವಿ-ಹೈದರಾಬಾದ್

* ಸ್ಪೈಸ್‌ಜೆಟ್‌ ಬೆಳಗಾವಿ-ದೆಹಲಿ

* ಸ್ಪೈಸ್‌ಜೆಟ್; ಬೆಳಗಾವಿ-ಬೆಂಗಳೂರು

* ಇಂಡಿಗೋ; ಬೆಳಗಾವಿ-ಚೆನ್ನೈ

* ಅಲಯನ್ಸ್ ಏರ್; ಬೆಳಗಾವಿ-ಪುಣೆ

* ಅಲಯನ್ಸ್‌ ಏರ್; ಬೆಳಗಾವಿ-ಬೆಂಗಳೂರು

* ಸ್ಟಾರ್ ಏರ್; ಬೆಳಗಾವಿ-ಬೆಂಗಳೂರು

* ಸ್ಟಾರ್ ಏರ್; ಬೆಳಗಾವಿ-ನಾಸಿಕ್

* ಟ್ರೂಜೆಟ್; ಬೆಳಗಾವಿ-ಮೈಸೂರು

* ಟ್ರೂಜೆಟ್; ಬೆಳಗಾವಿ-ತಿರುಪತಿ

* ಟ್ರೂಜೆಟ್‌ ಬೆಳಗಾವಿ-ಕಡಪ

* ಟ್ರೂಜೆಟ್; ಬೆಳಗಾವಿ-ಹೈದರಾಬಾದ್

ರಾಜ್ಯದ 3ನೇ ಅತಿ ಹೆಚ್ಚು ದಟ್ಟಣೆಯ ವಿಮಾನ ಅಕ್ಟೋಬರ್ ತಿಂಗಳಿನಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಆದ್ದರಿಂದ ಅತಿ ಹೆಚ್ಚು ದಟ್ಟಣೆಯ ರಾಜ್ಯದ 3ನೇ ವಿಮಾನ ನಿಲ್ದಾಣ ಎಂದು ಗುರುತಿಸಿಕೊಂಡಿತ್ತು.

ಅಕ್ಟೋಬರ್ ತಿಂಗಳಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಪ್ರಯಾಣಿಕರ ಸಂಖ್ಯೆ 24,359. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವರ ಸಂಖ್ಯೆ 29 ಸಾವಿರ. ಹುಬ್ಬಳ್ಳಿಗೆ 468 ವಿಮಾನಗಳು ಆಗಮಿಸಿದ್ದರೆ, ಬೆಳಗಾವಿಗೆ 522 ವಿಮಾನಗಳು ಆಗಮಿಸಿದ್ದವು.


Spread the love

About Laxminews 24x7

Check Also

170 ಲಕ್ಷ ಕೋಟಿ ಮೀರಿದ ಕೇಂದ್ರದ ಸಾಲ

Spread the love ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್‌ ಅಂತ್ಯದ ವೇಳೆಗೆ ₹171.78 ಲಕ್ಷ ಕೋಟಿಗೆ ಏರಿಕೆಯಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ