ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ನಿಷೇಧಿಸಲು ಅಗ್ರಹಿಸಿ ಕುಂದಾನಗರಿಯಲ್ಲಿ ಖಡಕ್ ಪ್ರತಿಭಟನೆ ನಡೆಸಲಾಯಿತು
ಸೋಮವಾರ ಬೀದಿಗಿಳಿದ ಕನ್ನಡ ಪರ ಹೋರಾಟಗಾರರು ಕನ‌್ನಡ ನಾಡಿನಲ್ಲಿ ಕನ್ನಡಕ್ಕೆ ಆಗುತ್ತಿರುವ ನಿರಂತರ ಅವಮಾನಕ್ಕೆ ಅಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಕರ್ನಾಟಕ ಏಕೀಕರಣ ಸಮಿತಿಯ ವತಿಯಿಂದ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉರುಳು ಸೇವೆ ಸಲ್ಲಿಸಲಾಯಿತು .ಕನ್ನಡಿಗರಿಗೆ ನ್ಯಾಯ ನೀಡಲು ಅಗ್ರಹಿಸಿ ಘೋಷಣೆ ಕೂಗಲಾಯಿತು.
ಕರ್ನಾಟಕ ಸರ್ಕಾರ ಕನ್ನಡಿಗರೊಂದಿಗೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿದ ಮಹಿಳಾ ಕಾರ್ಯಕರ್ತೆ ಕನ್ನಡ ನೆಲದಲ್ಲಿ ಕನ್ನಡ ಬಾವುಟ ಹಿಡಿದಿದ್ದಕ್ಕೆ ವಿದ್ಯಾರ್ಥಿಯನ್ನು ಅವಮಾನಿಸಿದ ಪೋಲಿಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಸಂಘಟನೆಯ ಪದಾಧಿಕಾರಿಗಳು ಗಡಿ ವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು , ಉಭಯ ಭಾಷಿಕಕರು ಸಹಬಾಳ್ವೆ ನಡೆಸುತ್ತಿರುವಾಗ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿಗೆ ತೀವ್ರ ಅಕ್ಷೇಪ ವ್ಯಕ್ತಪಡಿಸಿದರು.