ಬೆಂಗಳೂರು: ಅರಮನೆ ಮೈದಾನದಲ್ಲಿ ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅವರ ಮದುವೆ ಸೋಮವಾರ ಅದ್ದೂರಿಯಾಗಿ ನೆರವೇರಿತು. ಯುವ ರೈತ, ಉದ್ಯಮಿ ಯಶಸ್ವಿ ಪಾಟ್ಲ ಅವರ ಜೊತೆ ಅದಿತಿ ಸಪ್ತಪದಿ ತುಳಿದರು.
ಮದುವೆ ಸಂಭ್ರಮದಲ್ಲಿ ಪಾಲ್ಗೊಂಡ ಕುಟುಂಬಸ್ಥರು, ಸಂಬಂಧಿಕರು, ಚಿತ್ರರಂಗ, ರಾಜಕೀಯ ಗಣ್ಯರು ನವಜೋಡಿಗೆ ಶುಭಹಾರೈಸಿದರು.
ಅದಿತಿ ಮತ್ತು ಯಶಸ್ವಿ ಅವರ ನಿಶ್ಚಿತಾರ್ಥ ಕಳೆದ ವರ್ಷವೇ ನೆರವೇರಿತ್ತು. ನಿನ್ನೆ(ಭಾನುವಾರ) ಮೆಹಂದಿ ಶಾಸ್ತ್ರ, ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ನಡೆದಿತ್ತು. ಇಂದು ಬೆಳಗ್ಗೆ 9:30ರಿಂದ 10:32ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಆಯಿತು. ಅಭಿಮಾನಿಗಳು ನವ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರುತ್ತಿದ್ದಾರೆ