ಬೆಳಗಾವಿಯ ಪಂಚವಟಿ ಸೋನ್ಯಾ ಮಾರುತಿ ಮಂದಿರದಲ್ಲಿ ಕಾರ್ತಿಕ ಅಮವಾಸ್ಯೆ ನಿಮಿತ್ಯ ಮಹಾಪ್ರಸಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹೌದು ಬುಧವಾರ ಕಾರ್ತಿಕ ಅಮವಾಸ್ಯೆ ನಿಮಿತ್ಯ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಪಂಚವಟಿ ಸೋನ್ಯಾ ಮಾರುತಿ ಮಂದಿರದಲ್ಲಿ ಆಂಜನೇಯನಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಪುನಸ್ಕಾರ ಮಾಡಲಾಯಿತು. ಈ ವೇಳೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಬಳಿಕ ಉತ್ತರ ಶಾಸಕ ಅನಿಲ್ ಬೆನಕೆ ಆಗಮಿಸಿ ಹಣಮಂತ ದೇವರ ದರ್ಶನ ಪಡೆದುಕೊಂಡು, ಪೂಜೆ ಸಲ್ಲಿಸಿ ಮಹಾಪ್ರಸಾದ ವಿತರಣೆಗೆ ಚಾಲನೆ ನೀಡಿದರು.
ಈ ವೇಳೆ ಅರ್ಚಕರಾದ ಬಸವರಾಜ್ ಹಿರೇಮಠ ಅವರು ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಕಾರ್ತಿಕ ಮಾಸದ ಅಮವಾಸ್ಯೆ ನಿಮಿತ್ಯ ಸೋನ್ಯಾ ಮಾರುತಿ ಮಂದಿರದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದೇವೆ. ಎಲ್ಲ ಸದ್ಭಕ್ತರು ಮಹಾಪ್ರಸಾದ ಸ್ವೀಕರಿಸಿ ಪುನೀತರಾಗಬೇಕು ಎಂದು ಕೇಳಿಕೊಂಡರು. ಶಿವಾಜಿನಗರ, ವೀರಭದ್ರನಗರ, ಚವ್ಹಾಟ ಗಲ್ಲಿ ಸೇರಿ ವಿವಿಧ ನಗರಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು ಎಂದರು.