Breaking News

‘ಶಬರಿಮಲೆ’ಗೆ ತೆರಳೋ ‘ಅಯ್ಯಪ್ಪನ ಭಕ್ತ’ರಿಗೆ ಗುಡ್ ನ್ಯೂಸ್: KSRTCಯಿಂದ ‘ರಾಜಹಂಸ, ವೋಲ್ವೋ ಬಸ್’ ಸಂಚಾರ ವ್ಯವಸ್ಥೆ

Spread the love

ಬೆಂಗಳೂರು: ಕರ್ನಾಟಕದಿಂದ ( Karnataka ) ಶಬರಿಮಲೆಯ ಅಯ್ಯಪ್ಪ ಸ್ವಾಮಿ (Sabarimala Ayyappa Swamy ) ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿಸಿಯಿಂದ ಶಬರಿಮಲೆಗೆ ರಾಜಹಂಸ, ವೋಲ್ವೋ ಬಸ್ ( KSRTC Rajahamsa, Volvo Bus ) ಸಂಚಾರದ ವ್ಯವಸ್ಥೆಯನ್ನು ಮಾಡಿದೆ.

 

 

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ( Karnataka State Road Transport Corporation – KSRTC ), ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 01-12-2022ರಿಂದ ಹೊಸದಾಗಿ ಬೆಂಗಳೂರು – ನೀಲಕ್ಕಲ್ (ಪಂಪಾ-ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ವಾಹನಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದಿದೆ.

 

ಹೀಗಿದೆ KSRTC ರಾಜಹಂಸ ಬಸ್ ವೇಳಾಪಟ್ಟಿ ಹಾಗೂ ಪ್ರಯಾಣದರ

  • ದಿನಾಂಕ 01-12-2022ರಿಂದ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿದೆ. ಬೆಳಿಗ್ಗೆ 8.15ಕ್ಕೆ ನೀಲಕ್ಕಲ್ ಅಂದರೇ ಪಂಪಾ ಶಬರಿಮಲೆಯನ್ನು ತಲುಪಲಿದೆ.
  • ಇನ್ನೂ ಮರುದಿನ ಸಂಜೆ 5 ಗಂಟೆಗೆ ನೀಲಕ್ಕಲ್ ನಿಂದ ಹೊರಡಲಿರುವಂತ ಕೆ ಎಸ್ ಆರ್ ಟಿಸಿ ರಾಜಹಂಸ ಬಸ್, ಬೆಂಗಳೂರನ್ನು ಮರುದಿನ ಮಧ್ಯಾಹ್ನ 12 ಗಂಟೆಗೆ ತಲುಪಲಿದೆ.
  • ಬೆಂಗಳೂರು- ನೀಲಕ್ಕಲ್ ರಾಜಹಂಸ ಬಸ್ ಸಂಚಾರದ ಪ್ರಯಾಣ ದರವನ್ನು ವಯಸ್ಕರಿಗೆ ರೂ.1,150 ನಿಗದಿ ಪಡಿಸಲಾಗಿದೆ.

ಹೀಗಿದೆ ಕೆ ಎಸ್ ಆರ್ ಟಿ ಸಿ ವೋಲ್ವೋ ಬಸ್ ( KSRTC Volvo Bus ) ವೇಳಾಪಟ್ಟಿ ಹಾಗೂ ಪ್ರಯಾಣದರ

  • ದಿನಾಂಕ 01-12-2023ರಿಂದ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಗೆ ಬಸ್ ಹೊರಟು, ನೀಲಕ್ಕಲ್ ಅನ್ನು ಬೆಳಿಗ್ಗೆ 6.45ಕ್ಕೆ ತಲುಪಲಿದೆ.
  • ನೀಲಕ್ಕಲ್ ನಿಂದ ಸಂಜೆ 6 ಗಂಟೆಗೆ ಕೆಎಸ್ ಆರ್ ಟಿಸಿ ವೋಲ್ವೋ ಬಸ್ ಹೊರಟು, ಬೆಂಗಳೂರಿನ್ನು ಮರುದಿನ ಬೆಳಿಗ್ಗೆ 9.45ಕ್ಕೆ ತಲುಪಲಿದೆ.
  • ಬೆಂಗಳೂರು-ನೀಲಕ್ಕಲ್ ನ ವೋಲ್ವೋ ಬಸ್ ಪ್ರಯಾಣಕ್ಕೆ ದರವನ್ನು ರೂ.1,490 ನಿಗದಿ ಪಡಿಸಲಾಗಿದೆ.

Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ