ಖಾನಾಪುರದ ಲೈಲಾ ಶುಗರ್ಸ್ ಕಾರ್ಖಾನೆಯಲ್ಲಿ ಕಬ್ಬು ಪೂರೈಕೆ ಮಾಡಿದ ರೈತರು ಸಕ್ಕರೆ ಪಡೆಯಲು ಪರದಾಡಿದ ಘಟನೆ ನಡೆದಿದೆ.
ಹೌದು ಮಹಾಲಕ್ಷ್ಮೀ ಗ್ರುಪ್ ಸಂಚಾಲಿತ ಲೈಲಾ ಶುಗರ್ಸ್ ಕಾರ್ಖಾನೆಯಲ್ಲಿ ಕಳೆದ ದಿನಾಂಕ 14ರಿಂದ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪ್ರತಿ ಟನ್ 25 ರೂಪಾಯಿ ದರದಲ್ಲಿ ಸಕ್ಕರೆ ಪಡೆದುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿತ್ತು.
ಆದರೆ ತಾಲೂಕಿನ ಗಡಿಭಾಗ ಸೇರಿದಂತೆ ತಾಲೂಕಿನ ಬೇರೆ ಕಡೆಯಿಂದ ಬಂದು ತಮ್ಮ ಸ್ಲೀಪ್ ತೋರಿಸಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಂಡು ಕ್ರಮಬದ್ಧವಾಗಿ ಹೋಗಿ ಸಕ್ಕರೆ ಪಡೆದುಕೊಳ್ಳಬೇಕಿತ್ತು.
ಆದರೆ ಕಾರ್ಖಾನೆಯವರು ರೀತಿಯ ವ್ಯವಸ್ಥೆ ಮಾಡದೇ ಒಂದೇ ಒಂದು ತೂಕ ಮಾಡುವ ಯಂತ್ರ ಇಟ್ಟಿದ್ದು ಇದರಿಂದ ಸಿಬ್ಬಂದಿ ತಮಗೆ ಬೇಕಾದ ಹಾಗೆ ನೀಡುತ್ತಿದ್ದಾರೆ. ತುಂಬಾ ನಿಧಾನಗತಿಯಲ್ಲಿ ವಿತರಣೆ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಬೇಕೆಂದರೆ ಕಾಲ್ ರಿಸೀವ್ ಮಾಡುತ್ತಿಲ್ಲ. ನಮ್ಮ ಈ ನ್ಯೂಸ್ ನೋಡಿಯಾದರೂ ತ್ವರಿತವಾಗಿ ರೈತರಿಗೆ ಸಕ್ಕರೆಯನ್ನು ವಿತರಣೆ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.