ನೋಯ್ಡಾದಲ್ಲಿ ಜರುಗಿದ ಮೊದಲನೇ ಭಾರತೀಯ ಅಂತರರಾಷ್ಟ್ರೀಯ ವ್ಹೀಲ್‍ಚೇರ್ ಬಾಸ್ಕೇಟ್‍ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆಯ ಆಟಗಾರರು ಪದಕ ಬೇಟೆಯಾಡಿದ್ದಾರೆ.
ಇದೇ ನ.6ರಿಂದ 11ರವರೆಗೆ ನೋಯ್ಡಾದಲ್ಲಿ ನಡೆದ ಅಂತರರಾಷ್ಟ್ರೀಯ ವ್ಹೀಲ್‍ಚೇರ್ ಬಾಸ್ಕೇಟ್‍ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿಯ ಆಟಗಾರರಾದ ಬಸವರಾಜ್ ಸುಣಧೋಳಿ, ಲಲಿತಾ ಗವಸ, ಮಾಯಾ ಸಣ್ಣಲಿಂಗನ್ನವರ ಭಾರತ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಈ ಕ್ರೀಡಾಪಟುಗಳ ಸಾಧನೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಓಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಜಿನೇಶ್ವರ ಪಡನಾಡ, ಬಾಸ್ಕೇಟಬಾಲ್ ತರಬೇತಿದಾರ ವಿ.ಎಸ್.ಪಾಟೀಲ್ ಸೇರಿ ಇನ್ನಿತರರು ಅಭಿನಂದನೆ ಸಲ್ಲಿಸಿದ್ದಾರೆ.